ಮೂಡಿಗೆರೆ: ಮನೆಯ ನೀರಿನ ಟ್ಯಾಂಕ್ ನೊಳಗಿದ್ದ ಸುಮಾರು 18 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ರಕ್ಷಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗುತ್ತಿಹೆಸಗೋಡು ಗ್ರಾಮದಲ್ಲಿ ನಡೆದಿದೆ. ಹೆಸಗೋಡು ಗ್ರಾಮದ ಮಹೇಂದ್ರ ಎಂಬ ವಕೀಲರ ಮನೆಯ ಟ್ಯಾಂಕ್ ನಲ್ಲಿ ಕಾಳಿಂಗ ಪತ್ತೆಯಾಗಿದ್ದು, ಕಾಳಿಂಗನ ಗಾತ್ರವ ನ್ನು ನೋಡಿದ ಕೂಡಲೇ ಗಾಬರಿಗೊಂಡ ಮನೆ ಯವರು ಕೂಡಲೇ ಸ್ನೇಕ್ ಆರೀಫ್ ಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಹಾಗೂ ಅರಣ್ಯ ಸಿಬ್ಬಂದಿಗಳು ಸುಮಾರು 45 ನಿಮಿಷಗಳ ಕಾಲ ಹರಸಾಹಸಪಟ್ಟು ಹಾವನ್ನು ಸೆರೆ ಹಿಡಿದಿದ್ದಾರೆ. ಕಾಳಿಂಗನನ್ನುಸೆರೆ ಹಿಡಿದ ಬಳಿಕ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆಯಾದ ಕಾಳಿಂಗನನ್ನು ಮನೆಯ ಮುಂದೆಯೇ ಸ್ವಲ್ಪಹೊತ್ತು ಆಡಿಸಿ ಬೃಹತ್ ಕಾಳಿಂಗನನ್ನು ಕಂಡು ಗಾಬರಿಯಾದ ಸ್ಥಳಿಯರು ಫೋಟೋಗಳನ್ನು ತೆಗೆದುಕೊಂಡ ಬಳಿಕ ಕಾಳಿಂಗನನ್ನು ಅರಣ್ಯ ಇಲಾಖೆ ನೇತೃತ್ವದಲ್ಲಿ ಸ್ಥಳಿಯ ಚಾರ್ಮಾಡಿ ಆರಣ್ಯಕ್ಕೆ ಬಿಟ್ಟಿದ್ದಾರೆ.