ಫಸ್ಟ್ ಸುದ್ದಿ : ಥೈರಾಯ್ಡ್ ಸಮಸ್ಯೆ ಬರೀ ಮಹಿಳೆಯರಿಗೆ ಮಾತ್ರ ಕಾಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಪುರುಷರನ್ನೂ ಸಹ ಕಾಡ್ತಿದೆ. ಥೈರಾಯ್ಡ್ ಸಮಸ್ಯೆ ಹೊರಗಡೆ ಸುತ್ತುವ ಪುರುಷರಲ್ಲಿ ಹಲವು ಸಮಸ್ಯೆಗಳನ್ನ ತಂದಿಡುತ್ತಿದೆ. ಈ ಖಾಯಿಲೆಗೆ ಒಳಗಾಗುವ ಪುರುಷರಿಗೆ ಅವಿಶ್ರಾಂತಿ, ಸುಸ್ತು ಹಾಗೂ ಇರೆಕ್ಟೈಲ್ ಡಿಸ್‌ಫಂಕ್ಷನ್ ಸೇರಿದಂತೆ ನಾನಾ ರೀತಿಯ ತೊಂದರೆಗಳು ಕಾಡ್ತಿವೆ.
ಥೈರಾಯ್ಡ್ ಕಾಣಿಸಿಕೊಳ್ಳಲು ಕಾರಣಗಳು :
ನಿಮ್ಮ ವಂಶದಲ್ಲಿ ಯಾರಿಗಾದರು ಥೈರಾಯ್ಡ್ ಇದ್ದರೆ, ನಿಮಗೂ ಬರಬಹುದು.
ಗರ್ಭದಲ್ಲಿ ಜೆನೆಟಿಕ್ ಸಮಸ್ಯೆ ಇದ್ದರೆ ಥೈರಾಯ್ಡ್ ಕಾಣಿಸಿಕೊಳ್ಳುತ್ತದೆ.
ಆಯೋಡೈನ್ ಉಪ್ಪಿನ ಕೊರತೆಯೂ ಒಂದು ಪ್ರಮುಖ ಕಾರಣ.
ನೀವು ಕ್ಯಾನ್ಸರ್ ಒಳಗಾಗಿದ್ರೆ, ಆ ಸಮಯದಲ್ಲಿ ಪಡೆಯುವು ಚಿಕಿತ್ಸೆ ಕಿಮೋಥೆರಪಿ ಮತ್ತು ರೇಡಿಯೇಶನ್ ನಿಂದಲೂ ಥೈರಾಯ್ಡ್ ಬರಲಿದೆ.
ಥೈರಾಯ್ಡ್ ಗ್ಲ್ಯಾಂಡ್ ಆಪರೇಶನ್ನಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಕ್ಯಾನ್ಸರ್, ಡಿಪ್ರೆಶನ್, ಹೃದಯ ಸಂಬಂಧಿ ಕಾಯಿಲೆಗಳ ಸೈಡ್ ಎಫೆಕ್ಟ್ ನಿಂದಲೂ ಥೈರಾಯ್ಡ್ ಬರಲಿದೆ.
ಥೈರಾಯ್ಡ್ ನಿಂದ ಏನಾಗುತ್ತೆ ?
ಥೈರಾಯ್ಡ್ ಗೆ ಒಳಗಾದ್ರೆ, ತೂಕ ಹೆಚ್ಚಾಗುವುದು (ಹೈಪೋಥೈರಾಯಿಡಿಸಂ), ತೂಕ ಇಳಿಕೆ (ಹೈಪರ್ಥೈರಾಯಿಡಿಸಂ) ಇವೆರಡು ರೀತಿಯ ಥೈರಾಯ್ಡ್ ಸಮಸ್ಯೆ ಪುರುಷರಲ್ಲಿನ ಎಲ್ಲಾ ರೀತಿಯ ಶಕ್ತಿಯನ್ನು ಕುಂದಿಸುತ್ತದೆ.
ಹೈಪೋಥೈರಾಯಿಡಿಸಂನಲ್ಲಿ ಇರೆಕ್ಟಾಯಿಲ್ ಡಿಸ್ಫಂಕ್ಷನ್ ಥೈರಾಯ್ಡ್ ಕಾಣಿಸಿಕೊಂಡರೆ, ತೂಕ ಹೆಚ್ಚಾಗುವುದಿಲ್ಲ, ಬದಲಾಗಿ ದೈಹಿಕವಾಗಿ ಕುಗ್ಗುತ್ತೀರಿ.
ಹೈಪೋಥೈರಾಯಿಡಿಸಂನಿಂದ ತೂಕ ಕಡಿಮೆಯಾಗುತ್ತಾ ಹೋದಂತೆ, ಮಸಲ್ಸ್ ದುರ್ಬಲಗೊಂಡು ಕ್ರಮೇಣ ತಾಕತ್ತು ಕಳೆದುಕೊಳ್ತಾರೆ.
ಈ ವೇಳೆ ಏನು ಮಾಡಬೇಕು ?
ನೀವು ಥೈರಾಯ್ಡ್ ಟೆಸ್ಟ್ ಮಾಡಿಸಿದಾಗ, ಅದರಲ್ಲಿ ಟಿ3, ಟಿ4 ಮತ್ತು ಟಿಎಸ್ಎಚ್ ಎಂಬ 3 ವಿಧಗಳ ಆಧಾರದ ಮೇಲೆಯೇ ರಿಪೋರ್ಟ್ ನೀಡೋದು. ಈ ಮೂರರಲ್ಲಿ ಯಾವುದರಲ್ಲೂ ಅಬ್ನಾರ್ಮಲ್ ಎಂದು ಬಂದರೆ ಕೂಡಲೇ ವೈದ್ಯರನ್ನ ಸಂಪರ್ಕಿಸಿ.
ಥೈರಾಯ್ಡ್ ಲಕ್ಷಗಳೇನು?
ಸಮಯಕ್ಕೆ ಮೊದಲು ಕೂದಲು ಬಿಳಿಯಾಗೋದ್ರ ಜೊತೆ ಉದುರುವುದು.
ಯಾವುದೇ ಕೆಲಸ ಮಾಡಿದ ತಕ್ಷಣ ಸುಸ್ತಾಗಿ, ಆಲಸ್ಯ ಉಂಟಾಗುತ್ತದೆ. ಸ್ವಲ್ಪ ಹೊತ್ತು ಸಣ್ಣ ಕೆಲಸ ಮಾಡಿದ್ರು ಸುಸ್ತಾಗುತ್ತೆ ಅಂದರೆ ಅದು ಥೈರಾಯ್ಡ್ನ ಸಿಟ್ಮಮ್.
ಟೈಮಿಗೆ ಸರಿಯಾಗಿ ಎಷ್ಟೆ ಊಟ ಮಾಡಿದ್ರು ಒಂದೇ ಬಾರಿ ಹಸಿವಾಗುತ್ತೆ ಅಂದ್ರೆ ಅದು ಹೈಪರ್ಥೈರಾಯ್ಡ್ನ ಲಕ್ಷಣ. ಇದನ್ನ ನಿರ್ಲಕ್ಷಿಸಬೇಡಿ. ಯಾಕಂದ್ರೆ, ಇದು ಹೆಚ್ಚಾದಂತೆ ಹಸಿವೂ ಹೆಚ್ಚಾಗುತ್ತೆ. ನಿಮ್ಮ ಡಯಟ್ ಕೂಡ ಚೇಂಜ್ ಆಗುತ್ತೆ.
ಗಾಯವೇನು ಆಗದೆ, ಕೈ, ಕಾಲು, ಸೊಂಟ, ತೊಡೆಗಳಲ್ಲಿ ನೋವು ಬರ್ತಿದೆ ಅಂದ್ರೆ ನಿಮಗೆ ಥೈರಾಯ್ಡ್ ಸಮಸ್ಯೆ ಇದೆ ಅಂತ ಅರ್ಥ. ಮಸಲ್ಸ್ಗಳಲ್ಲಿ ನೋವು ಕಾಣಿಸಿಕೊಳ್ತಿದ್ರೆ ಅದು ಸಹ ಥೈರಾಯ್ಡ್ ನ ಲಕ್ಷಣ. ಆದ್ದರಿಂದ ಈ ಸಮಸ್ಯೆಯನ್ನ ಯಾವತ್ತೂ ನಿರ್ಲಕ್ಷ್ಯ ಮಾಡಬೇಡಿ.










