ಮೈಸೂರು : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡಿನ ಶಕ್ತಿದೇವತೆಯಾದ ಚಾಮುಂಡೇಶ್ವರಿಯ ವರ್ಧಂತ್ಯುತ್ಸವ ಇಂದು ನಡೆಯುತ್ತಿದ್ದು, ಚಾಮುಂಡಿ ಬೆಟ್ಟವನ್ನು ಪೂರ್ತಿ ಹೂಗಳಿಂದ ಅಲಂಕರಿಸಲಾಗಿದ್ದು, ಚಾಮುಂಡಿದೇವಿಗೆ ವಿಶೇಷ ಪೂಜೆ ಏರ್ಪಡಿಸಲಾಗಿದ್ದು.ಮೈಸೂರು ರಾಜಮನೆತನದ ಸಮ್ಮುಖದಲ್ಲಿ ಪಲ್ಲಕಿ ಉತ್ಸವ ನಡೆಯಲಿದ್ದು, ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರವೇ ಹರಿದಿದ್ದು,. ಉತ್ಸವದ ಮೆರವಣಿಗೆಯಲ್ಲಿ ಯದುವಂಶದ ಯದುವೀರ ಒಡೆಯರ್ ಭಾಗಿಯಾಗಿದ್ದು,. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸ್ ಬಿಗಿ ಬಂದೋಬಸ್ತ್ ವಹಿಸಿದೆ.