ಬೆಂಗಳೂರು- ಪ್ರತ್ಯೇಕ ರಾಜ್ಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ವೆಂಕಟರಾವ್ ನಾಡಗೌಡ ಅವರು ಶ್ರೀರಾಮುಲು ಅವರಿಗೆ ಉತ್ತರ ಕರ್ನಾಟಕದ ಬಗ್ಗೆ ಏನು ಗೊತ್ತಿದೆ? ರಾಜ್ಯ ವಿಭಜನೆಯಾದರೆ ಉತ್ತರ ಕರ್ನಾಟಕದ ಅಭಿವೃದ್ದಿ ಸಾಧ್ಯವಿಲ್ಲ. ಮೂರ್ಖನಂತೆ ಮಾತನಾಡುತ್ತಿದ್ದಾರೆ. ಪ್ರತ್ಯೇಕ ರಾಜ್ಯಕ್ಕೆ ಸಂಬಂಧಿಸಿದಂತೆ ಬಿ.ಜೆ.ಪಿ ಅವರು ಮಗುವನ್ನು ಚಿವುಟೋದು ಅವರೆ ಬಳಿಕ ಸಮಾಧಾನ ಮಾಡುವುದು ಅವರೆ. ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಿದ್ದೆ ಬಿ.ಎಸ್ ಯಡಿಯೂರಪ್ಪ, ಒಂದು ಕಡೆ ಪ್ರತ್ಯೇಕ ರಾಜ್ಯ ಬೇಕು ಎಂದು ಹೋರಾಟ ಮಾಡುತ್ತಾರೆ.ಇನ್ನೊಂದು ಕಡೆ ಅವರ ನಾಯಕರೆ ಬಿ.ಜೆ.ಪಿ ನಾಯಕರು ಸಾಮಾಧಾನ ಮಾಡುತ್ತಾರೆ. ಬಿಜೆಪಿ ಅವರ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ನಮ್ಮ ತಟ್ಟೆಯಲ್ಲಿ ನೋಣ ಇದೆ ಅಂತಾರೆ.ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.