ಕಳಸ- ಕುದುರೆಮುಖದ ಸೂಜಿಗುಡ್ಡದಲ್ಲಿ ಸ್ಪೋಟಗೊಂಡಂತ ಶಬ್ದಗಳು ಬರುತ್ತಿದ್ದು,ಕೆಲವೆಡೆ ಭೂಕುಸಿತಗಳು ಉಂಟಾಗಿದೆ ಎನ್ನುವ ಮಾತುಗಳು ಸ್ಥಳಿಯರಿಂದ ಕೇಳಿಬರುತ್ತಿದ್ದು,ಈ ಭಾಗದ ಗ್ರಾಮಸ್ಥರು ಆತಂಕವನ್ನು ವ್ಯಕ್ತ ಪಡಿಸುತ್ತಿದ್ದಾರೆ.ಕಳೆದ ಎರಡು ದಿನಗಳಿಂದ ಇಲ್ಲಿಯ ಬೃಹತ್ ಗಾತ್ರದ ಸೂಚಿ ಗುಡ್ಡದಿಂದ ಸ್ಪೋಟಗೊಂಡ ಶಬ್ದವು ಕೇಳಿ ಬಂದಿದೆ.ಈ ಶಬ್ದವನ್ನು ನಾವು ಕೇಳಿದ್ದೇವೆ.ಇದಕ್ಕೆ ಪೂರಕವೆಂಬಂತೆ ನೆಲ್ಲಿಬೀಡು ಸಮೀಪದ ಮನೆಯೊಂದರ ಆಸು ಪಾಸುಗಳು ಬಿರುಕುಗಳು ಕಾಣಿಸಿಕೊಂಡಿದೆ.ಅಲ್ಲದೆ ಕಾಫಿ ತೋಟದಲ್ಲಿ ಅಲ್ಲಲ್ಲಿ ಭೂಕುಸಿತಗಳು ಕಂಡು ಬಂದಿವೆ ಎನ್ನುತ್ತಾರೆ ಸ್ಥಳಿಯರು.ಆದರೆ ಸೂಜಿಗುಡ್ಡದ ಕಡೆಯಿಂದ ಶಬ್ದ ಕೇಳಿಬಂದಿರುವುದು ನಿಜವೇ ಅಥವಾ ಕದ್ದು ಶಿಖಾರಿಗೆ ಹೋಗಿ ಅಲ್ಲಿ ಕೋವಿಯಿಂದ ಹೊರ ಬಂದ ಶಬ್ದವೇ ಅನ್ನುವುದನ್ನು ಕೂಡ ಸ್ಥಳಿಯರು ಸಂಶಯ ವ್ಯಕ್ತ ಪಡಿಸುತ್ತಿದ್ದಾರೆ. ಭೂಕುಸಿತಗೊಂಡ ಪ್ರದೇಶಕ್ಕೆ ಸ್ಥಳಿಯ ಸಂಸೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.ಅಲ್ಲದೆ ಹೋಬಳಿಯ ಚೆನ್ನಡ್ಲು, ತಾರಿಕೊಂಡು ಭಾಗಗಳಲ್ಲಿಯೂ ಭೂಕುಸಿತವಾಗಿದೆ.ಈ ಭೂಕುಸಿತಗಳು ಕೊಡಗಿನಲ್ಲಿ ನಡೆದ ಭೂಕುಸಿತದ ರೀತಿಯಲ್ಲಿಯೇ ನಡೆದಿದೆ.ಕೊಡಗಿನಲ್ಲಿ ದೊಡ್ಡ ಮಟ್ಟದಲ್ಲಿ ಆಗಿದೆ.ಇಲ್ಲಿ ಸಣ್ಣ ಮಟ್ಟದಲ್ಲಿ ಆಗಿದೆ ಎನ್ನುತ್ತಾರೆ ಮರಸಣಿಗೆಯ ವಿಶ್ವನಾಥ್.