ದೆಹಲಿ- ಕೊಡಗಿನಲ್ಲಿ ಉಂಟಾಗಿರುವ ಅಪಾರ ಪ್ರಮಾಣದ ನಷ್ಟಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಿಎಸ್ ಯಡಿಯೂರಪ್ಪ ನಾವು ಈಗಾಗಲೇ ಪ್ರಧಾನಿ ಬಳಿ ಕೊಡಗಿಗೆ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಿದ್ದೇವೆ. ಇಂದು ಕೂಡ ಸಂಸದರ ಜೊತೆ ಸೇರಿ ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿ, ಕೊಡಗಿಗೆ ಉಂಟಾಗಿರುವ ಹಾನಿಗೆ ಹೆಚ್ಚಿನ ನೆರವನ್ನು ನೀಡುವಂತೆ ಹಾಗೂ ವೈಮಾನಿಕ ಸಮೀಕ್ಷೆ ನಡೆಸುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ದೆಹಲಿಯಲ್ಲಿ ತಿಳಿಸಿದ್ದಾರೆ.