ಸಿದ್ದಗಂಗಾ ಶ್ರೀಗಳಿಗೆ ‘ಭಾರತರತ್ನ’ ನಿರೀಕ್ಷಿಸಿದ್ದೆವು,ಆದರೆ ಕೈಗೂಡದಿರುವುದು ನಿರಾಸೆ ತಂದಿದೆ:ಸಿ.ಎಂ ಕುಮಾರಸ್ವಾಮಿ…

328
firstsuddi

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗೆ ಆಯ್ಕೆಯಾದ ಗಣ್ಯರಿಗೆ ಅಭಿನಂದನೆ ತಿಳಿಸಿದ್ದು, ಸಿದ್ದಗಂಗಾ ಶ್ರೀಗಳಿಗೆ ‘ಭಾರತ ರತ್ನ’ ಘೋಷಿಸದ ಕೇಂದ್ರ ಸರ್ಕಾರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗೆ ಆಯ್ಕೆಯಾದ ಗಣ್ಯರಿಗೆ ಅಭಿನಂದನೆ. ರಾಜ್ಯದ ವಿಜ್ಞಾನಿ ರೋಹಿಣಿ ಗೋಡ್ಬೋಲೆ, ಸಂಗೀತ ವಿದ್ವಾಂಸ ಪಂ.ರಾಜೀವ್ ತಾರಾನಾಥ್, ಸಾಲುಮರದ ತಿಮ್ಮಕ್ಕ, ಪ್ರಾಚ್ಯಶಾಸ್ತ್ರಜ್ಞರಾದ ಶಾರದಾ ಶ್ರೀನಿವಾಸನ್, ಕಲಾವಿದ ಪ್ರಭುದೇವ ಅವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿರುವುದು ಸಂತಸ ತಂದಿದೆ. ಕೆಲವು ಸಾಧಕರಿಗೆ ಮರಣೋತ್ತರವಾಗಿಯಾದರೂ ಈ ಪ್ರಶಸ್ತಿ ಘೋಷಣೆಯಾಗಿರುವುದು ಹರ್ಷ ತಂದಿದೆ.ಆದರೆ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಹಾಗೂ ಇನ್ನೂ ಹಲವು ಅರ್ಹ ಸಾಧಕರಿಗೆ ಪದ್ಮ ಪ್ರಶಸ್ತಿ ನಿರೀಕ್ಷಿಸಿದ್ದೆವು. ಇದು ಕೈಗೂಡದಿರುವುದು ನಿರಾಸೆ ತಂದಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಅಸಮಾಧಾನವನ್ನು ಟ್ವಿಟ್ ಮೂಲಕ ಹೊರಹಾಕಿದ್ದಾರೆ.