ಮೊದಲ ಗಂಡನನ್ನು ನೆನೆದು ಸೆಲ್ಫಿ ವಿಡಿಯೋ ಮಾಡಿ ಗೃಹಿಣಿ ಆತ್ಮಹತ್ಯೆ…

751
firstsuddi

ಬೆಂಗಳೂರು: ಮೊದಲನೆ ಗಂಡನನ್ನು ನೆನೆದು  ಗೃಹಿಣಿವೋರ್ವಳು ಸೆಲ್ಫಿ ವಿಡಿಯೋ ಮಾಡಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿವೇಕ ನಗರದ ಈಜೀಪುರದಲ್ಲಿ ನಡೆದಿದೆ. ಅಂಕಿತಾ (32) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಈಕೆ ಮೊದಲ ಗಂಡನಿಂದ ವಿಚ್ಛೇದನ ಪಡೆದ ಬಳಿಕ ಸೋನಮ್ ಎಂಬಾತನೊಂದಿಗೆ ವಿವಾಹವಾಗಿದ್ದರು. ಇತ್ತೀಚೆಗೆ ಎರಡನೇ ಗಂಡ ಸೋನಮ್ ಅಂಕಿತಾ ನನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಅಂಕಿತಾ ಮೊದಲ ಗಂಡನನ್ನು ನೆನೆದು ನೇಪಾಳಿ ಭಾಷೆಯಲ್ಲಿ ಸೆಲ್ಫಿ ವಿಡಿಯೋ ಮಾಡಿಕೊಂಡು ನಂತರ ವೇಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿವೇಕನಗರ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.