ಮೂಡಿಗೆರೆ ನಳಂದಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ…

1639
firstsuddi

ಮೂಡಿಗೆರೆ- ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಳಂದ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿಗಳು ಆರ್ಯವೇದಿಕ್ ಗಿಡಗಳನ್ನು ನೆಡುವುದರ ಮೂಲಕ ಆಚರಿಸಿದರು. ದಿನದಿಂದ ದಿನಕ್ಕೆ ಪರಿಸರ ವಿನಾಶವಾಗುವ ಈ ಸಂದರ್ಭದಲ್ಲಿ ಆರೋಗ್ಯದಾಯಕವಾದ ಅಂಶಗಳನ್ನು ಮುಂದಿಟ್ಟುಕೊಂಡು ವಿಶ್ವಪರಿಸರ ದಿನಾಚರಣೆಗೆ ಅರ್ಥಪೂರ್ಣವಾದ ಮಹತ್ವವನ್ನು ಕೊಡಬೇಕೆಂಬ ನಿಟ್ಟಿನಲ್ಲಿ, ವಿದ್ಯಾರ್ಥಿಗಳಿಗೆ ಎಳವಯಸ್ಸಿನಲ್ಲಿಯೇ ಇಂತಹ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂಬ ಅಂಶವನ್ನು ಮನದಟ್ಟುಮಾಡುವಂತೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರಾದ ಗಾಯಿತ್ರಿ ಹಾಗೂ ಆಡಳಿತಾಧಿಕಾರಿಯಾದ ಸುರೇಶ್,ಗಣೇಶ್, ಶಿಕ್ಷಕಿಯರಾದ ಲೂರ್ದ್ ಮೇರಿ, ಇರ್ಫಾನಾ, ಪಂಚಮಿ, ಹಾಗೂ ಗೋವಿಂದ್‍ರಾಜ್,ಉಪಸ್ಥಿತರಿದ್ದರು.