ಕೊಡಗು -ಮಡಿಕೇರಿಯ ನೇಹಾ ಗಂಗಮ್ಮ(19) ಮೈಸೂರು ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಬಿಬಿಎ ಕಲಿಯುತ್ತಿದ್ದ ನೇಹಾ, ಅಲ್ಲಿನ ಗೋಕುಲಂನ ಪಿ.ಜಿ. ಯಲ್ಲಿದ್ದರು,ಮೈಸೂರಿನ ಜಯಲಕ್ಷ್ಮೀಪುರದಲ್ಲಿರುವ ರೋಹಿಣಿ ಬ್ಯೂಟಿ ಝೋನ್ ನಲ್ಲಿ ಹೇರ್ ಸ್ಟ್ರೈಟ್ನಿಂಗ್ ಮಾಡಿಸಿದ್ದರು. ಆದರೆ ಹೇರ್ ಸ್ಟ್ರೈಟ್ನಿಂಗ್ ಬಳಿಕ ಕೂದಲು ವಿಪರೀತ ಉದುರಲು ಪ್ರಾರಂಭಿಸಿತ್ತು. ಅನೇಕ ಬಾರಿ ನೇಹಾ ತಮ್ಮ ಪೊಷಕರ ಬಳಿ, ನಾನು ಕಾಲೇಜಿಗೆ ಹೋಗಲ್ಲ ನನ್ನ ಕೂದಲು ಉದುರುವಿಕೆ ಸರಿಯಾದ ನಂತರ ಹೋಗುತ್ತೇನೆ ಎಂದು ಹೇಳಿದ್ದಾಳೆ. ಆಗ ಪೋಷಕರು ಕೂಡ ಆಕೆಯನ್ನ ಸಮಾಧಾನ ಮಾಡಿ ಕಾಲೇಜಿಗೆ ಹೋಗು ಎಂದು ಹೇಳಿ ಮೈಸೂರಿಗೆ ಕಳುಹಿಸಿದ್ದಾರೆ. ಇದರಿಂದ ನೇಹಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಂತರ ಆ.28ರಂದು ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ನಿಟ್ಟೂರು ಗ್ರಾಮದ ಲಕ್ಷ್ಮಣ ತೀರ್ಥದಲ್ಲಿ ನೇಹಾ ಶವ ಪತ್ತೆಯಾಗಿದೆ. ನೇಹಾ ಪೋಷಕರು ಬ್ಯೂಟಿ ಪಾರ್ಲರ್ ವಿರುದ್ಧ ಆರೋಪ ಮಾಡಿದ್ದಾರೆ.