ʻಕರಿಮಣಿ ಮಾಲೀಕ ನೀನಲ್ಲʼ ಹಾಡಿಗೆ ರೀಲ್ಸ್ ಮಾಡಿದ ಪತ್ನಿ- ಮನನೊಂದು ಪತಿ ಆತ್ಮಹತ್ಯೆ…

60
firstsuddi

ಚಾಮರಾಜನಗರ: ರಿಯಲ್ ಸ್ಟಾರ್ ಉಪೇಂದ್ರ ನಟನೆಯ “ಉಪೇಂದ್ರʼʼ ಸಿನಿಮಾದ ಓ ನಲ್ಲ.. ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ. ಎಲ್ಲರೂ ಈ ಹಾಡಿನ ರೀಲ್ಸ್, ಮಾಡಿದ್ದೇ ಮಾಡಿದ್ದು.

ಇದರ ನಡುವೆ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬಳು, ಕರಿಮಣಿ ಮಾಲೀಕ ನೀನಲ್ಲ ಎನ್ನುವ ವೈರಲ್ ಹಾಡಿಗೆ ರೀಲ್ಸ್ ಮಾಡಿದ್ದಕ್ಕೆ, ಮನನೊಂದು ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಪಿ.ಜಿ.ಪಾಳ್ಯ ಗ್ರಾಮದ ಕುಮಾರ್ (33) ನೇಣಿಗೆ ಶರಣಾದ ಪತಿ. ಕುಮಾರ್ ಪತ್ನಿ ರೂಪಾ ಎಂಬಾಕೆ ತನ್ನ ಸೋದರಮಾವ ಹಾಗೂ ಸಹೋದರಿ ಜತೆಗೆ ಸೇರಿ ಓ ನಲ್ಲ, ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ ಎಂಬ ಸಾಂಗ್‌ಗೆ ರೀಲ್ಸ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಳು. ಈ ರೀಲ್ಸ್ ವಿಚಾರಕ್ಕೆ ಊರಲ್ಲಿ ಕುಮಾರ್‌ನನ್ನು ಕೆಲವರು ಕಾಲೆಳೆದು ಯಾರಪ್ಪಾ ಕರಿಮಣಿ ಮಾಲೀಕ ಎಂದು ಹೀಯಾಳಿಸಿದ್ದರಿಂದ ಮನನೊಂದು ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ರೂಪಾ ಅವರ ರೀಲ್ಸ್ಅನ್ನು ನೋಡಿ ಕುಮಾರ್ ಅವರ ಗೆಳೆಯರು ಆತನನ್ನು ರೇಗಿಸಿದ್ದರು. ಅದಲ್ಲದೆ, ಅವರ ಕುಟುಂಬಸ್ಥರು ಕೂಡ ಇದೇ ವಿಚಾರವಾಗಿ ಆತನ ಕಾಲೆಳೆದಿದ್ದರು. ಇದರಿಂದ ಮನನೊಂದಿದ್ದ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.