ಅಂಡಮಾನ್ ಪ್ರವಾಸಕ್ಕೆ ತೆರಳಿದ 50ಮಂದಿ ಕನ್ನಡಿಗರಿಗೆ ರಾಜ್ಯ ಸರ್ಕಾರದಿಂದ ಸಹಾಯ ಹಸ್ತ…

192
firstsuddi

ಬೆಂಗಳೂರು : ಪ್ರವಾಸಕ್ಕೆಂದು ಅಂಡಮಾನ್‍ಗೆ ತೆರಳಿದ 50 ಮಂದಿ ವಕೀಲರು ಹಾಗೂ ನ್ಯಾಯಾಧೀಶರು ವಿಮಾನ ಲಭ್ಯತೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಸುಮಾರು 50 ಮಂದಿ ಕನ್ನಡಿಗರಿಗೆ ಕರ್ನಾಟಕ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದು, ಮೂಡಿಗೆರೆಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಶಿಕಲ ಅವರು ಖಾಸಗಿ ವಿಮಾನ ಕಂಪನಿ ಅವರ ನಿರ್ಲಕ್ಷದ ಬಗ್ಗೆ ದೂರವಾಣಿ ಮೂಲಕ ಸಿಎಂ ಕುಮಾರಸ್ವಾಮಿ ಕಚೇರಿಯ ಗಮನಕ್ಕೆ ತಂದಿದ್ದು, ಅದರಂತೆ ಕೂಡಲೇ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದ್ದು, ಸಂಕಷ್ಟಕ್ಕೆ ಸಿಲುಕಿರುವ ವಕೀಲರು ಹಾಗೂ ನ್ಯಾಯಾಧೀಶರಿಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿಯ ಕಾರ್ಯದರ್ಶಿ ಹಾಗೂ ದೆಹಲಿಯಲ್ಲಿರುವ ಸ್ಥಾನಿಕ ಆಯುಕ್ತರಿಗೆ ಸೂಚಿಸಿದ್ದು, ಅದರಂತೆ ಇಂದು 2ಗಂಟೆಗೆ ಹೊರಡ ಬೇಕಿದ್ದ ವಿಮಾನ ರದ್ದಾಗಿದ್ದರಿಂದ ನಾಳೆ ಮುಂಜಾನೆ ವಿಮಾನದಲ್ಲಿ ಬೆಂಗಳೂರಿಗೆ ಹಿಂದಿರುಗಲು ವ್ಯವಸ್ಥೆ ಮಾಡಲಾಗಿದ್ದು, ಸಂಕಷ್ಟದಲ್ಲಿ ಸಿಲುಕಿದ್ದ ಕನ್ನಡಿಗರು ಸ್ಪಂಧಿಸಿದ ಮುಖ್ಯಮಂತ್ರಿ ಅವರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.