ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ ರಾಸ್ ಟೇಲರ್.

120
firstsuddi

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನ ಕ್ರಿಕೆಟಿಗ ರಾಸ್ ಟೇಲರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ.

ಈ ಬಗ್ಗೆ ರಾಸ್ ಟೇಲರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಇದೊಂದು ಅದ್ಭುತ ಪ್ರಯಾಣವಾಗಿದೆ. ನನ್ನ ದೇಶವನ್ನು ಪ್ರತಿನಿಧಿಸಿರುವುದು ನನ್ನ ಜೀವಿತಾವಧಿಯ ಅದೃಷ್ಟ ಎಂದು ಭಾವಿಸುತ್ತೇನೆ. ಎಲ್ಲಾ ಒಳ್ಳೆಯ ವಿಷಯಗಳು ಒಂದೆಲ್ಲಾ ಒಂದು ದಿನ ಕೊನೆಗೊಳ್ಳಬೇಕು. ಹಾಗೇ ನಾನು ನಿವೃತ್ತಿ ಹೊಂದಲು ಇದು ಸರಿಯಾದ ಸಮಯ ಎಂದಿದ್ದಾರೆ.

37 ವರ್ಷದ ಟೇಲರ್ 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ಈವರೆಗೆ 233 ಏಕದಿನ ಪಂದ್ಯಗಳನ್ನು ಆಡಿರುವ ಅವರು ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು 2006ರಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಕಣಕ್ಕಿಳಿದಿದ್ದರು. ಟೇಲರ್ ಟೆಸ್ಟ್ ಕ್ರಿಕೆಟ್ನಲ್ಲಿ 19 ಶತಕಗಳೊಂದಿಗೆ 7584 ರನ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ 8581 ರನ್ ಬಾರಿಸಿದ್ದಾರೆ.