ಅಕ್ರಮ ಚಿನ್ನ ಸಾಗಣೆ ಪ್ರಕರಣ ; ಸ್ವಪ್ನಾ ಸುರೇಶ್ ಜೈಲಿನಿಂದ ರಿಲೀಸ್…

87
firstsuddi

ತಿರುವನಂತಪುರ : ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಆರೋಪಿ ಸ್ವಪ್ನಾ ಅವರಿಗೆ ನವೆಂಬರ್ 2 ರಂದು ಕೇರಳ ಹೈಕೋರ್ಟ್ 25 ಲಕ್ಷ ರೂ. ಬಾಂಡ್ ಹಾಗೂ ಶೂರಿಟಿಯೊಂದಿಗೆ ಜಾಮೀನು ನೀಡಿತ್ತು. ಈ ಹಿನ್ನಲೆ ಇಂದು ಜೈಲಿನಿಂದ ರಿಲೀಸ್ ಆಗಿದ್ದಾರೆ. ಸ್ವಪ್ನಾ ಸುರೇಶ್ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಸ್ವಪ್ನಾ ಸುರೇಶ್ ಜೊತೆಗೆ ಸರಿತ್ ಪಿ.ಎಸ್, ಜಲಾಲ್ ಎ.ಎಂ, ಮೊಹಮದ್ ಶಫಿ ಪಿ, ರಾಬಿನ್ಸ್ ಹಮೀದ್, ರಮೀಸ್ ಕೆ.ಟಿ, ಮೊಹಮದ್ ಅಲಿ, ಶರಾಫುದ್ದೀನ್ ಕೆ.ಟಿ ಎಂಬ ಏಳು ಮಂದಿಗೂ ಕೇರಳ ಹೈಕೋರ್ಟ್ ಜಾಮೀನು ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್ ಮತ್ತು ಸಿ.ಜಯಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು , ಆರೋಪಿಗಳು ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ ಎಂದು ತಿಳಿಸಿತ್ತು.
2020ರ ಜುಲೈ 5ರಂದು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ 14.82 ಕೋಟಿ ಮೌಲ್ಯದ 30 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿತ್ತು.