ಅಮೃತ್‍ಸರ: ಅಕ್ರಮವಾಗಿ ನೆಲಸಿರುವ ಭಾರತೀಯ ವಲಸಿಗರ ವಿರುದ್ಧ ಅಮೆರಿಕದ ನೂತನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕಠಿಣ ಕ್ರಮ ತೆಗದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಅಕ್ರಮ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡುತ್ತಿದ್ದಾರೆ. ಅದರಂತೆ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ 205 ಮಂದಿಯನ್ನು ಭಾರತಕ್ಕೆ ಕಳುಹಿಸಿದೆ. ಇವರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನ ಅಮೃತ್‍ಸರ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ. ಮಂಗಳವಾರ ಮಧ್ಯಾಹ್ನ ಸ್ಯಾನ್ ಆಂಟೋನಿಯೊದಿಂದ ಹೊರಟಿರುವ ವಿಮಾನ ಇಂದು ಅಮೃತಸರದ ಶ್ರೀ ಗುರು ರಾಮದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಅಮೆರಿಕದಿಂದ ವಿಮಾನ ಹೊರಡುತ್ತಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಅಮೃತ್‍ಸರದಲ್ಲಿ ಜನಸಂದಣಿ ಹೆಚ್ಚಾಗಿದೆ. ಅಮೆರಿಕದಿಂದ ಭಾರತೀಯರನ್ನು ಹೊತ್ತ ವಿಮಾನ ಹೊರಡುತ್ತಿದ್ದ ಸುದ್ದಿ ತಿಳಿಯುತ್ತಿದ್ದಂತೆ ಅವರ ಸಂಬಂಧಿಕರು ವಿಮಾನ ನಿಲ್ದಾಣದತ್ತ ಮುಖ ಮಾಡಿದ್ದಾರೆ. ವಿಮಾನದಲ್ಲಿ 11 ಮಂದಿ ಸಿಬ್ಬಂದಿ ಹಾಗೂ 45 ಅಮೆರಿಕನ್ ಅಧಿಕಾರಿಗಳು ಇದ್ದಾರೆ. ಇವರು 205 ಭಾರತೀಯರನ್ನು ಅಮೃತ್‍ಸರ ವಿಮಾನ ನಿಲ್ದಾಣದಲ್ಲಿ ಇಳಿಸಿದ ಬಳಿಕ ವಾಪಸ್ ಆಗಲಿದೆ. ಈ 205 ಮಂದಿಯಲ್ಲಿ ಪಂಜಾಬ್ ಹೊರತಾದ ಇತರ ರಾಜ್ಯದ ಭಾರತೀಯರು ಇದ್ದಾರೆ. ಇವರ ಆಗಮನ ಹಿನ್ನಲೆ ವಿಮಾನ ನಿಲ್ದಾಣದಲ್ಲಿ ಭಾರತೀಯ ಭದ್ರತಾ ಏಜೆನ್ಸಿಗಳನ್ನು ಕೂಡ ಸೇವೆಗೆ ನಿಯೋಜಿಸಲಾಗಿದೆ. ಮಾಧ್ಯಮಗಳ ಮಾಹಿತಿ ಪ್ರಕಾರ, ಅಮೆರಿಕದಲ್ಲಿ 1.5 ಮಿಲಿಯನ್ ಜನರನ್ನು ಗಡಿಪಾರು ಮಾಡಲು ಈಗಾಗಲೇ ಗುರುತಿಸಲಾಗಿದೆ. ಇದರಲ್ಲಿ 18 ಸಾವಿರ ಮಂದಿ ಭಾರತೀಯರಿದ್ದಾರೆ ಎಂದು ತಿಳಿದುಬಂದಿದೆ. ಪಟ್ಟಿ ಸಿದ್ಧತೆ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಸಿ-17 ಮಿಲಿಟರಿ ವಿಮಾನದಲ್ಲಿ 205 ಮಂದಿ ಭಾರತೀಯರನ್ನು ಗಡಿಪಾರು ಮಾಡಲಾಗಿದೆ.










