ಅಕ್ರಮವಾಗಿ ಸಾಗಿಸುತ್ತಿದ್ದ 340 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ…

136
firstsuddi

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬೋದೂರಿನ ಟೋಲ್ ಪ್ಲಾಜಾ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 340 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಹಾರ ಇಲಾಖೆ ನಿರೀಕ್ಷಕ ನಿತೀನ್ ಅಗ್ನಿ ನೇತ್ರತ್ವದಲ್ಲಿ ದಾಳಿ ಮಾಡಿ, ಗಂಗಾವತಿಯಿಂದ ಗುಜರಾತ್‍ಗೆ ಹೊರಟಿದ್ದ ಲಾರಿ ವಶಕ್ಕೆ ಪಡೆದಿದ್ದು, ಸುಮಾರು 8.10 ಲಕ್ಷ ರೂಪಾಯಿ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಲಾರಿ ಚಾಲಕ ಮದನಲಾಲ್ ಹಾಗೂ ಗಂಗಾವತಿಯ ಅಭಿಜಿತ್ ಟ್ರೇಡರ್ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.