ನ್ಯೂಯಾರ್ಕ್ : ಸಾಮಾನ್ಯವಾಗಿ ಮಹಿಳೆ ಗರ್ಭ ಧರಿಸಿದ 9 ತಿಂಗಳ ಬಳಿಕ ಮಗುವಿಗೆ ಜನ್ಮ ನೀಡುತ್ತಾರೆ. ಆದರೆ ಅಮೆರಿಕಾದ ಅಲಬಾಮದಲ್ಲಿ ಕೇವಲ 21 ವಾರಕ್ಕೆ ಶಿಶು ಜನಿಸಿ ಇಡೀ ವೈದ್ಯಕೀಯ ಲೋಕವೇ ಅಚ್ಚರಿ ಪಡುವ ರೀತಿ ಬದುಕುಳಿದಿದೆ.
2020 ಜುಲೈ5ರಂದು ಮಿಶೆಲ್ ಬಟ್ಲರ್ ಎಂಬುವವರು ಈ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಆ ಮಗುವಿಗೆ 16 ತಿಂಗಳು ವಯಸ್ಸು. ಹೀಗಾಗಿ, ಗಿನ್ನಿಸ್ ರೆಕಾರ್ಡ್ ಬುಕ್ ನಲ್ಲಿ ಮಗುವಿನ ಹೆಸರು ದಾಖಲಾಗಿದೆ. ಹುಟ್ಟಿದಾಗ ಈ ಗಂಡು ಮಗು ಕೇವಲ 420 ಗ್ರಾಂ ಇತ್ತು. ಈಗ ಇದು ಸಾಮಾನ್ಯ ಮಗುವಿನಂತೆ ಬೆಳೆಯುತ್ತಿದೆ.
ಕೇವಲ 21 ವಾರ(ಐದುವರೆ ತಿಂಗಳು)ಕ್ಕೆ ಮಗು ಜನನವಾಗಿದೆ. ಹೀಗಾಗಿ, ಮೂರು ತಿಂಗಳ ಕಾಲ ವೆಂಟಿಲೇಟರ್ ನಲ್ಲಿಡಲಾಗಿತ್ತು. ಮಗುವಿಗೆ ಈಗಲೂ ಫೀಡಿಂಗ್ ಟ್ಯೂಬ್ ಹಾಗೂ ಆಮ್ಲಜನಕದ ಅವಶ್ಯಕತೆ ಇದ್ದು, ವೈದ್ಯರು ಮೇಲಿಂದ ಮೇಲೆ ನಿಗಾ ಇಡಲಿದ್ದಾರೆಂದು ತಿಳಿದು ಬಂದಿದೆ.










