ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಜನ್ಮದಿನ-ಪ್ರಧಾನಿ ಮೋದಿ ಅವರು ಸೇರಿ ಗಣ್ಯರಿಂದ ಪುಷ್ಪನಮನ…

214
firstsuddi

ನವದೆಹಲಿ : ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಸದೈವ್ ಅಟಲ್‍ನಲ್ಲಿರುವ ವಾಜಪೇಯಿ ಅವರ ಸಮಾಧಿಗೆ ತೆರಳಿ ಪುಷ್ಪನಮನ ಸಲ್ಲಿಸಿದರು. ಇದಕ್ಕೂ ಮೊದಲು ಟ್ವೀಟ್ ಮಾಡಿದ ಪ್ರಧಾನಿ ಮೋದಿ ಅವರು, ದೇಶವಾಸಿಗಳ ಮನದಲ್ಲಿ ನೆಲೆಸಿರುವ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯಂದು ಅವರಿಗೆ ಕೋಟಿ ಕೋಟಿ ನಮನಗಳು ಎಂದು ಬರೆದುಕೊಂಡಿದ್ದು, ಪ್ರಧಾನಿ ಮೋದಿ ಅವರು ಲಖನೌದಲ್ಲಿ ನಿರ್ಮಾಣವಾಗಿರುವ ವಾಜಪೇಯಿ ಅವರ ಪುತ್ಥಳಿಯನ್ನು ಇಂದು ಅನಾವರಣ ಮಾಡಲಿದ್ದಾರೆ.