ಅಪ್ಪ-ಅಮ್ಮನನ್ನು ಕಳೆದುಕೊಂಡ ನೋವು – ಜನ್ಮದಿನದಂದೇ ಆತ್ಮಹತ್ಯೆಗೆ ಶರಣಾದ ಯುವಕ…

111
firstsuddi

ಮೈಸೂರು : ತಂದೆ,ತಾಯಿಯ ಅಗಲಿಕೆಯಿಂದ ಮನನೊಂದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಎನ್.ಆರ್.ಮೊಹಲ್ಲಾ ನಿವಾಸಿ ಎಸ್.ಕಾರ್ತಿಕ್ (30) ಮೃತ ದುರ್ದೈವಿ. ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಅವರ ತಾಯಿ ಡಾ.ಪಾರ್ವತಿ ಕೆಲವು ವರ್ಷಗಳ ಹಿಂದೆಷ್ಟೇ ಸಾವನ್ನಪ್ಪಿದ್ದರು. ನಂತರ ತಂದೆ ಶಿವಲಿಂಗಯ್ಯ ಕೂಡ ಮೃತಪಟ್ಟಿದ್ದರು. ಚಿಕ್ಕಮ್ಮನ ಆಸರೆಯಲ್ಲಿದ್ದ ಕಾರ್ತಿಕ್, ಕೆಲ ದಿನಗಳ ಹಿಂದಷ್ಟೇ ಎನ್.ಆರ್.ಮೊಹಲ್ಲಾದಲ್ಲಿ ಬಾಡಿಗೆ ರೂಂ ಮಾಡಿ ವಾಸವಾಗಿದ್ದರು.

ಪೋಷಕರನ್ನು ಕಳೆದುಕೊಂಡು ಮನನೊಂದಿದ್ದ ಕಾರ್ತಿಕ್ ಈ ಹಿಂದೆಯೇ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಮೂರನೇ ಬಾರಿ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ವಿಷ ಸೇವಿಸಿ ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.