ಅಫ್ಘಾನ್ – ಭಾರತದ ರಫ್ತು ,ಆಮದು ವ್ಯವಹಾರಕ್ಕೆ ನಿರ್ಬಂಧ ಹೇರಿದ ತಾಲಿಬಾನ್ ; ಭಾರತದಲ್ಲಿ ಒಣಹಣ್ಣುಗಳ ಬೆಲೆ ಏರಿಕೆ…

153
firstsuddi

ನವದೆಹಲಿ : ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನಿಗಳು ಅಫ್ಘಾನ್ – ಭಾರತದ ರಫ್ತು ಹಾಗೂ ಆಮದು ವ್ಯವಹಾರಕ್ಕೆ ನಿರ್ಬಂಧ ಹೇರಿದ್ದು, ಇದರ ಪರಿಣಾಮ ಭಾರತದಲ್ಲಿ ಡ್ರೈ ಫ್ರೂಟ್ಸ್ ಬೆಲೆ ಏರಿಕೆಯಾಗಿದೆ.

ಈ ಬಗ್ಗೆ ಭಾರತೀಯ ರಫ್ತು ಸಂಸ್ಥೆ(ಎಫ್ಐಇಒ)ಯ ಮಹಾನಿರ್ದೇಶಕ(ಡಿಜಿ) ಡಾ.ಅಜಯ್ ಸಹಾಯ್ ಅವರು ಮಾಹಿತಿ ನೀಡಿದ್ದು, ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ನಂತರ ಎಲ್ಲ ಆಮದು ಹಾಗೂ ರಫ್ತುಗಳನ್ನು ನಿಲ್ಲಿಸಿದ್ದಾರೆ. ಪಾಕಿಸ್ತಾನದ ಮಾರ್ಗವಾಗಿ ಭಾರತಕ್ಕೆ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಪ್ರಸ್ತುತ ತಾಲಿಬಾನ್ ಪಾಕಿಸ್ತಾನಕ್ಕೆ ಸರಕು ಸಾಗಣೆ ನಿಲ್ಲಿಸಿದೆ, ಹೀಗಾಗಿ ಆಮದು ನಿಂತಿದೆ. ವಾಣಿಜ್ಯ ವಹಿವಾಟು ಶೀಘ್ರ ಆರಂಭವಾಗದಿದ್ದಲ್ಲಿ ಡ್ರೈ ಫ್ರೂಟ್ಸ್ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಹೇಳಿದರು.

ಭಾರತ ಹಾಗೂ ಅಫ್ಘಾನಿಸ್ತಾನದ ನಡುವಿನ ದ್ವಿಪಕ್ಷೀಯ ವ್ಯಾಪಾರವು 2019-20ರಲ್ಲಿ 1.52 ಬಿಲಿಯನ್ ಡಾಲರ್ ಆಗಿತ್ತು. ಭಾರತದಿಂದ 826 ಮಿಲಿಯನ್ ಡಾಲರ್ ಮೌಲ್ಯದ ಸರಕನ್ನು ರಫ್ತು ಮಾಡಲಾಗುತ್ತಿತ್ತು. 2020-21ರಲ್ಲಿ 510 ಮಿಲಿಯನ್ ಡಾಲರ್ ಸರಕನ್ನು ಆಮದು ಮಾಡಿಕೊಳ್ಳಲಾಗಿದೆ.