ಬ್ಯೂನಸ್ ಐರಿಸ್ : ಅರ್ಜೆಂಟೀನಾ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್ ಅವರನ್ನು ವ್ಯಕ್ತಿಯೋರ್ವ ಗುಂಡಿಕ್ಕಿ ಹತ್ಯೆಗೈಯಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಕ್ರಿಸ್ಟಿನಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ. ಘಟನೆಯ ವೀಡಿಯೋ ವೈರಲ್ ಆಗಿದೆ.
ಇಂದು ಬೆಳಗ್ಗೆ ಅವರ ನಿವಾಸದೆದುರು ಘಟನೆ ನಡೆದಿದೆ. ಕ್ರಿಸ್ಟಿನಾ ಅವರು ಕಾರಿನಿಂದ ಇಳಿದಾಗ ಅವರನ್ನು ಮಾತನಾಡಿಸಲು ಅಪಾರ ಸಂಖ್ಯೆಯಲ್ಲಿ ಜನ ನೆರೆದಿರುತ್ತಾರೆ. ಈ ವೇಳೆ ಜನಸಂದಣಿ ನಡುವೆ ಇದ್ದ ವ್ಯಕ್ತಿಯೊಬ್ಬ ಕ್ರಿಸ್ಟಿನಾ ಅವರ ಹತ್ತಿರಕ್ಕೆ ಬಂದು, ಅವರ ತಲೆಗೆ ಗನ್ ಗುರಿಯಿಟ್ಟು ಟ್ರಿಗರ್ ಒತ್ತುತ್ತಾನೆ. ಆದರೆ ಗುಂಡು ಹಾರಿಲ್ಲ. ಆರೋಪಿತ ವ್ಯಕ್ತಿ ಬ್ರೆಜಿಲ್ ಮೂಲದವನು ಎನ್ನಲಾಗ್ತಿದೆ. ಆತನ ಬಂಧನ ಮಾಡಲಾಗಿದೆ.
ಅರ್ಜೆಂಟೀನಾದಲ್ಲಿ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆ ಪರಿಣಾಮವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಉಪಾಧ್ಯಕ್ಷ ಕ್ರಿಸ್ಟಿನಾ ಅವರು ಭ್ರಷ್ಟಾಚಾರದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದಾರೆ.
‼️JUST IN‼️
🇧🇷❌🇦🇷Footage from another angle shows the moment when a Brazilian National named Fernando Andrés Sabag Montiel pulled a gun and tried to assassinate Argentina's left-wing Vice-President Cristina Kirchner
— The gun notoriously failed on the last moment pic.twitter.com/JgmUlNuP2Q
— AZ 🛰🌏🌍🌎 (@AZmilitary1) September 2, 2022










