ಅಲ್ಪಸಂಖ್ಯಾತರ ಉನ್ನತ ಶಿಕ್ಷಣ ಸಂಸ್ಥೆಗಳ ನಿಯಮ ಸರಳಗೊಳಿಸಿಸಲು ಸರ್ಕಾರ ಮುಂದು.

29

ಬೆಂಗಳೂರು: ಅಲ್ಪಸಂಖ್ಯಾತರ ಸ್ಥಾನಮಾನ ಪಡೆಯಲು ಅಲ್ಪಸಂಖ್ಯಾತ ಸಮುದಾಯದ ಶೇಕಡಾ 50ರಷ್ಟು ವಿದ್ಯಾರ್ಥಿಗಳನ್ನು ಸೇರಿಸುವುದು ಸೇರಿದಂತೆ ಕೆಲವು ನಿಯಮಗಳಿಂದ ಧಾರ್ಮಿಕ ಅಲ್ಪಸಂಖ್ಯಾತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮುಕ್ತಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳಿಗೆ ನಿಯಮಗಳು, 2024 ರ ತಿದ್ದುಪಡಿಯ ಕರಡನ್ನು ಕರ್ನಾಟಕ ಗೆಜೆಟ್‍ನಲ್ಲಿ ಪ್ರಕಟಿಸಲು, ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಆಹ್ವಾನಿಸಲು ಸಂಪುಟ ನಿರ್ಧರಿಸಿದೆ. ಯಾವುದೇ ಆಕ್ಷೇಪಗಳು ಬರದಿದ್ದರೆ, ಕರಡು ನಿಯಮಗಳನ್ನು ಮತ್ತೊಮ್ಮೆ ಸಂಪುಟದ ಮುಂದೆ ಮಂಡಿಸದೆ ಅಂತಿಮಗೊಳಿಸಲಾಗುತ್ತದೆ. ರಾಜ್ಯದ ಅಲ್ಪಸಂಖ್ಯಾತರಲ್ಲಿ ಮುಸಲ್ಮಾನರು, ಕ್ರೈಸ್ತರು, ಸಿಖ್ಖರು, ಜೈನರು, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಜನಸಂಖ್ಯೆಯು ಕಡಿಮೆ ಇರುವುದರಿಂದ, ಈ ಸಮುದಾಯಗಳಿಂದ ಶೇಕಡಾ 50ರಷ್ಟು ವಿದ್ಯಾರ್ಥಿಗಳನ್ನು ಹೊಂದಲು ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಅವರು ನಡೆಸುವ ಸಂಸ್ಥೆಗಳಲ್ಲಿ ಕಷ್ಟವಾಗುತ್ತದೆ ಎಂದು ಸಚಿವ ಸಂಪುಟ ಗಮನಿಸಿ ಅಸ್ತಿತ್ವದಲ್ಲಿರುವ ನಿಯಮಗಳಿಗೆ ತಿದ್ದುಪಡಿಯನ್ನು ಸಮರ್ಥಿಸಿದೆ.