ತಿರುಪತಿ: ಈ ಹಿಂದೆ ಆಂಧ್ರಪ್ರದೇಶದ ತಿರುಪತಿಯ ಹೋಟೆಲ್‍ಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬರುತ್ತಿದ್ದವು ಆದರೆ ಇದೀಗ ತಿರುಪತಿಯಲ್ಲಿರುವ ಪ್ರಸಿದ್ದವಾದ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ಸಂದೇಶ ಬಂಧ ಹಿನ್ನಲೆಯಲ್ಲಿ ದೇಗುಲದ ಸುತ್ತ ಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪಾಕಿಸ್ತಾನದ ಐಎಸ್‍ಐ ಜೊತೆ ಸಂಬಂಧ ಹೊಂದಿರುವ ಭಯೋತ್ಪಾದಕರು ದೇವಸ್ಥಾನವನ್ನು ಸ್ಪೋಟಿಸುವುದಾಗಿ ಇಸ್ಕಾನ್ ದೇವಸ್ಥಾನದ ಸಿಬ್ಬಂದಿಗೆ ಇ-ಮೇಲ್ ಮೂಲಕ ಸಂದೇಶ ಕಳುಹಿಸಿದ್ದಾರೆ.
ಬಾಂಬ್ ಬೆಸದರಿಕೆ ಬೆನ್ನಲ್ಲೆ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ತಂಡಗಳು ಸ್ಥಳಕ್ಕೆ ಕರೆಸಿದ್ದು, ದೇವಸ್ಥಾನದ ಸುತ್ತ ಮುತ್ತ ಶೋಧ ಕಾರ್ಯಾಚರಣೆಯನ್ನು ನಡೆಸಿವೆ. ಆದರೆ, ದೇವಸ್ಥಾನದ ಆವರಣದಲ್ಲಿ ಸ್ಫೋಟಕ ಅಥವಾ ಇತರ ಯಾವುದೇ ಅನುಮಾನ ಮೂಡಿಸುವ ವಸ್ತುಗಳು ಪತ್ತೆಯಾಗಿಲ್ಲ. ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ತಿರುಪತಿ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಂಧ್ರಪ್ರದೇಶದ ತಿರುಪತಿಯಲ್ಲಿ ಸತತ ಬಾಂಬ್ ಬೆದರಿಕೆ ಸಂದೇಶಗಳಿಂದ ಭಕ್ತರು ಭಯಗೊಂಡಿದ್ದಾರೆ. ಹಾಗಾಗಿ ಬೆದರಿಕೆ ಹಾಕುತ್ತಿದ್ದವರ ಪತ್ತೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಅವರ ವಿರುದ್ದ ಕಠಿನ ಕ್ರಮ ಕೃಗೊಳ್ಳಲಾಗುವುದು ಎಂದು ತಿರುಪತಿ ನಗರದ ಪೋಲಿಸರು ತಿಳಿಸಿದ್ದಾರೆ.










