ಆನೇಕಲ್ ಬಳಿ ರೈಲು ಅಪಘಾತ – ಕಂಟೈನರ್ ಸಂಪೂರ್ಣ ಜಖಂ…

80
firstsuddi

ಆನೇಕಲ್ : ತಾಲೂಕಿನ ಆವಲಹಳ್ಳಿ ಬಳಿ ಪ್ಯಾಸೆಂಜರ್ ಎಕ್ಸ್ ಪ್ರೆಸ್ ರೈಲೊಂದು ಕಂಟೈನರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಂಟೈನರ್ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೈಸೂರಿನಿಂದ ತಮಿಳುನಾಡಿನ ಮೈಲಾರಪುರಿಗೆ  ಎಕ್ಸ್ ಪ್ರೆಸ್ ಪ್ಯಾಸೆಂಜರ್ ರೈಲು ಹೋಗುತ್ತಿತ್ತು. ಈ ವೇಳೆ, ದುರ್ಘಟನೆ ಸಂಭವಿಸಿದೆ.

ಹುಸ್ಕೂರು ರೈಲಿನ ಹಳಿಯ ಅಂಡರ್ ಪಾಸ್ ದ್ವಿಪಥ ರೈಲ್ವೆ ಕಾಮಗಾರಿ ಚಾಲನೆಯಲ್ಲಿದ್ದು, ಉಳಿದಂತೆ ಇದ್ದ ಕಚ್ಚಾ ರಸ್ತೆ ಮಳೆಗೆ ಹಾಳಾಗಿದೆ. ನಿನ್ನೆ ರಾತ್ರಿ 9ಕ್ಕೆ ಹಳೆಯ ಮರೆತ ರಸ್ತೆಯ ಮೂಲಕ ರೈಲ್ವೆ ಹಳಿಯನ್ನು ಕಂಟೈನರ್ ದಾಟುತಿದ್ದ ವೇಳೆ ಅಪಘಾತ ಸಂಭವಿಸಿದೆ.

ಲಾರಿ ಚಾಲಕ ಹಳಿ ದಾಟುವ ಹೊತ್ತಿಗೆ ರೈಲು ಬಂದಿದೆ. ತಕ್ಷಣವೇ ಲಾರಿ ಚಾಲಕ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ.