ಆನ್‌ಲೈನ್ ಮೂಲಕ ಲಕ್ಷಾಂತರ ನಗದು ವಂಚನೆ ; ನೈಜೀರಿಯಾ ಪ್ರಜೆಯ ಬಂಧನ…

70
firstsuddi

ವಿಜಯಪುರ : ಆನ್ಲೈನ್ ಮೂಲಕ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ವಿಜಯಪುರ ಸಿಇಎನ್ ಪೊಲೀಸರು ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ.

ಆಪ್ರೋಚ್ಚಿ ಆಂಥೋನಿ ಬಂಧಿತ ಆರೋಪಿ. ಈತ ಆನ್ಲೈನ್ ಮೂಲಕ ಕೊಲ್ಹಾರ ಪಟ್ಟಣದ ಕಿರಣ ಕಲ್ಲಪ್ಪ ದೇಸಾಯಿಗೆ ಸುಮಾರು 16 ಲಕ್ಷ ರೂ. ಹಣ ವಂಚನೆ ಮಾಡಿದ್ದಾನೆ. ಅಲ್ಲದೇ ಔಷಧ ನೀಡುವ ವಿಚಾರದಲ್ಲಿ ವಂಚನೆ ಮಾಡಿದ್ದಾಗಿ ಕಿರಣ ದೇಸಾಯಿ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದ ಮೇಲೆ ಈತನನ್ನು ಸಿಇಎನ್ ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ.