ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಕಲ್ಲಿದ್ದಲು ಕೊರತೆ – ವಿದ್ಯುತ್ ಉತ್ಪಾದನೆ ಘಟಕಗಳು ಸ್ಥಗಿತ…

59
firstsuddi

ರಾಯಚೂರು : ಜಿಲ್ಲೆಯ ಶಕ್ತಿ ನಗರದಲ್ಲಿರುವ ಆರ್ ಟಿಪಿಎಸ್ ಶಾಖೋತ್ಪನ್ನ ಕೇಂದ್ರದಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆ ಘಟಕಗಳು ಸ್ಥಗಿತವಾಗಿದೆ.

ಶಕ್ತಿನಗರದ ಆರ್ ಟಿಪಿಎಸ್ ನಲ್ಲಿ ಒಟ್ಟು 8 ಘಟಕಗಳಿವೆ. ಇವುಗಳ ಪೈಕಿ ಈಗಾಗಲೇ ನಾಲ್ಕು ಘಟಕಗಳು ಬಂದ್ ಆಗಿದೆ.  ಸದ್ಯ ಕೇವಲ ನಾಲ್ಕು ಘಟಕಗಳಿಂದ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ರಾಜ್ಯದಲ್ಲಿ ವಿದ್ಯುತ್ ಕೊರತೆಯ ಭೀತಿ ಎದುರಾಗಿದೆ. 1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮಥ್ರ್ಯದ ಆರ್ ಟಿಪಿಎಸ್ ಕೇವಲ 500 ಮೆಗಾವ್ಯಾಟ್‍ನಷ್ಟು ವಿದ್ಯುತ್ ಉತ್ಪಾದಿಸ್ತಿದೆ.

ಕಲ್ಲಿದ್ದಲು ಕೊರತೆ ಉಂಟಾದ ಕಾರಣ ವಿದ್ಯುತ್ ಉತ್ಪಾದನೆ ಘಟಕಗಳು ಸ್ಥಗಿತಗೊಂಡಿವೆ ಎಂದು ಹೇಳಲಾಗುತ್ತಿದೆ. ನಿತ್ಯ 11 ರೇಕ್ ಕಲ್ಲಿದ್ದಲು ಬಳಕೆಯಾಗುತ್ತಿತ್ತು. ಇದೀಗ ಮೂರ್ನಾಲ್ಕು ರೇಕ್ ಗಳು ಮಾತ್ರ ಕಲ್ಲಿದಲು ಬರುತ್ತಿದೆ.