ಆಹಾರ ಮತ್ತು ಕೃಷಿ ಸಂಸ್ಥೆಯ 75ನೇ ವಾರ್ಷಿಕೋತ್ಸವ-75 ರೂ. ನಾಣ್ಯವನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ…

202
firstsuddi

ನವದೆಹಲಿ : ಇಂದು ಆಹಾರ ಮತ್ತು ಕೃಷಿ ಸಂಸ್ಥೆಯ 75ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 75 ರೂ. ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಇತ್ತೀಚೆಗೆ ಅಭಿವೃದ್ಧಪಡಿಸಿದ ಜೈವಿಕ ವೈವಿಧ್ಯದ 8 ಪ್ರಬೇಧಗಳನ್ನು ಸಮರ್ಪಿಸಿದರು. ಈ ಮೂಲಕ ಕೃಷಿ ಮತ್ತು ಪೋಷಣೆಗೆ ಸರ್ಕಾರವು ನೀಡಿದ ಹೆಚ್ಚಿನ ಆಧ್ಯತೆಯನ್ನು ಸೂಚಿಸುತ್ತದೆ. ಹಾಗೂ ಇದು ಹಸಿವು ಹಾಗೂ ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಸಂಕಲ್ಪಕ್ಕೆ ಸಾಕ್ಷಿಯಾಗಿದೆ.
ಭಾರತವು ಎಫ್ಎಒ ಜೊತೆ ಐತಿಹಾಸಿಕ ಒಡನಾಟವನ್ನು ಹೊಂದಿದ್ದು, ಭಾರತೀಯ ನಾಗರಿಕ ಸೇವಾ ಅಧಿಕಾರಿ ಡಾ. ಬಿನಯ್ ರಂಜನ್ ಸೇನ್ 1956-1967ರ ಅವಧಿಯಲ್ಲಿ ಎಫ್ಎಒ ಮಹಾನಿರ್ದೇಶಕರಾಗಿದ್ದರು. 2016 ರಲ್ಲಿ ದ್ವಿದಳ ಧಾನ್ಯಗಳ ಅಂತಾರಾಷ್ಟ್ರೀಯ ವರ್ಷ ಮತ್ತು ಮಿಲ್ಲೆಟ್ಗಳ ಅಂತಾರಾಷ್ಟ್ರೀಯ ವರ್ಷ 2023ಕ್ಕೆ ಭಾರತದ ಪ್ರಸ್ತಾಪಗಳನ್ನು ಎಫ್ಎಒ ಅನುಮೋದಿಸಿದೆ.