ಇಂದಿನಿಂದ ಎಲ್‍ಕೆಜಿ, ಯುಕೆಜಿ, ಅಂಗನವಾಡಿ ಪ್ರಾರಂಭ…

85
firstsuddi

ಬೆಂಗಳೂರು : ಇಂದಿನಿಂದ ರಾಜ್ಯಾದ್ಯಂತ ಎಲ್‍ಕೆಜಿ, ಯುಕೆಜಿ ಮತ್ತು ಅಂಗನವಾಡಿ ಕೇಂದ್ರಗಳು ಓಪನ್ ಆಗಲಿವೆ.

ಕೊರೊನಾ ನಿಯಂತ್ರಣಕ್ಕೆ ಬಂದ ಹಿನ್ನೆಲೆ ಇಂದಿನಿಂದ ಪೂರ್ವ ಪ್ರಾಥಮಿಕ ತರಗತಿಗಳು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ಇದರ ಜತೆಗೆ ಮಾರ್ಗಸೂಚಿ ಪಾಲಿಸುವಂತೆ ಆದೇಶ ನೀಡಿದೆ.

ಮಾರ್ಗಸೂಚಿಗಳೇನು?
• 2% ಒಳಗೆ ಕೊರೊನಾ ಕೇಸ್ ಇರುವ ತಾಲೂಕುಗಳಲ್ಲಿ ಮಾತ್ರ ತರಗತಿ ಪ್ರಾರಂಭ ಮಾಡಬೇಕು
• ಸೋಮವಾರದಿಂದ ಶುಕ್ರವಾರದ ಒಳಗೆ ಬೆಳಗ್ಗೆ 9.30 ರಿಂದ ಮಧ್ಯಾಹ್ನ 3.30 ವರೆಗೆ ತರಗತಿ ನಡೆಸಬೇಕು.
• ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ತರಬೇಕು.
• ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಕುಟುಂಬದವರಿಗೆ ಆರೋಗ್ಯ ಸಮಸ್ಯೆ ಇದ್ದರೆ ಅಂತಹ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಅವಕಾಶ ನೀಡಬಾರದು.
• ಶಿಕ್ಷಕರು, ಸಿಬ್ಬಂದಿ ಕಡ್ಡಾಯವಾಗಿ 2 ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು.
ಎಲ್ಲಾ ಶಿಕ್ಷಕರು, ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
• ವಿದ್ಯಾರ್ಥಿಗೆ ಸೋಂಕು ಬಂದ ಕೂಡಲೇ ಶಾಲೆ ಕ್ಲೋಸ್ ಮಾಡಿಸಿ ಎಲ್ಲಾ ವಿದ್ಯಾರ್ಥಿಗಳಿಗೂ ತಪಾಸಣೆ ನಡೆಸಬೇಕು.
• ನಿತ್ಯ ಶಾಲಾ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಬೇಕು.
• ಮನೆಯಿಂದಲೇ ಮಕ್ಕಳು ಉಪಹಾರ ಮತ್ತು ಕುಡಿಯುವ ನೀರು ತರಲು ಅವಕಾಶ ಕೊಡಬೇಕು. ಶಾಲೆಗಳಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.