ಇಂದಿನಿಂದ ಸವದತ್ತಿ ರೇಣುಕಾ ಯಲಮ್ಮ ದೇಗುಲ ಓಪನ್…

79
firstsuddi

ಬೆಳಗಾವಿ : ಇಂದಿನಿಂದ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿರುವ ರೇಣುಕಾ ಯಲಮ್ಮ ದೇಗುಲ ಓಪನ್ ಆಗಲಿದೆ.

ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಕಳೆದ 18 ತಿಂಗಳಿಂದ ಬಂದ್ ಆಗಿದ್ದ ದೇವಾಲಯ ಇಂದಿನಿಂದ ಓಪನ್ ಆಗಲಿದ್ದು, ಭಕ್ತರ ಭೇಟಿಗೆ ಅವಕಾಶ ನೀಡಿ ಡಿಸಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.

ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಪಾಸಿಟಿವ್ ರೇಟ್ ಕಡಿಮೆಯಾದ ಹಿನ್ನಲೆ ದೇವಸ್ಥಾನ ತೆರೆಯಲು ಅನುಮತಿ ನೀಡಿದ್ದು ಜನರು ಸೇರುವ ಉತ್ಸವ, ಜಾತ್ರೆ ನಡೆಸದಂತೆ ನಿರ್ಬಂಧ ಹೇರಿದ್ದಾರೆ. ಕಡ್ಡಾಯವಾಗಿ ಕೊವಿಡ್ ನಿಯಮ ಪಾಲಿಸಲು ಯಲಮ್ಮ ದೇಗುಲದ ಆಡಳಿತ ಮಂಡಳಿಗೆ ಡಿಸಿ ಸೂಚನೆ ನೀಡಿದ್ದಾರೆ.