ಇಂದು ಸಿಎಂ ಮೊಮ್ಮಗಳ ಮದುವೆ : ಗಣ್ಯಾತೀಗಣ್ಯರು ಭಾಗಿ…

140
Firstsuddi

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು, ಸಿಎಂ ಪುತ್ರಿ ಅರುಣಾದೇವಿಯವರ ಮಗಳು ಮಾಧುರ್ಯ ಅವರ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನೆರೆವೇರಿದೆ. ನಿನ್ನೆ ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಇಂದು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಿಖಿಲ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಿಎಸ್ ವೈ ಮೊಮ್ಮಗಳ ಮದುವೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ, ಶ್ರೀಮಂತ್ ಪಾಟೀಲ್,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಎಂಪಿ ಪ್ರತಾಪ್ ಸಿಂಹ ಸೇರಿದಂತೆ ರಾಜಕೀಯ ಪಕ್ಷದ ನಾಯಕರು, ಗಣ್ಯರು ಭಾಗಿಯಾಗಿ ವಧು-ವರರಿಗೆ ಶುಭ ಹಾರೈಸಿದರು.