ಇನ್ಸ್ಟಾಗ್ರಾಮ್ ನಲ್ಲಿ 10 ಕೋಟಿ ಫಾಲೋವರ್ಸ್ ಹೊಂದಿದ ವಿರಾಟ್ ಕೊಹ್ಲಿ…!

111
Firstsuddi

ನವದೆಹಲಿ : ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಇನ್ಸ್ಟಾಗ್ರಾಮ್ ನಲ್ಲಿ 10 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಈ ಮೂಲಕವಾಗಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತದ ಮೊದಲ ವ್ಯಕ್ತಿಯಾಗಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ 10 ಕೋಟಿ ದಾಟಿದ್ದು, ಈ ಸಾಧನೆ ಮಾಡಿರುವ ಕೊಹ್ಲಿಯ ಬಗ್ಗೆ ಐಸಿಸಿ ಕೂಡ ಟ್ವೀಟ್ ಮಾಡಿದೆ. ಐಸಿಸಿ ತನ್ನ ಟ್ವೀಟ್‍ನಲ್ಲಿ 100 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಜನರ ಫೋಟೋಗಳನ್ನು ಪೋಸ್ಟ್ ಮಾಡಿದೆ. ಅದರಲ್ಲಿ ಕೊಹ್ಲಿ ಇನ್ಸ್ಟಾಗ್ರಾಮ್ ನಲ್ಲಿ 100 ಮಿಲಿಯನ್ ಫಾಲೋವರ್ಸ್ ಹೊಂದಿರುವ ಮೊದಲ ಕ್ರಿಕೆಟಿಗ ಎಂದು ಬರೆಯಲಾಗಿದೆ.

ಇನ್ಸ್ಟಾಗ್ರಾಮ್ ನಲ್ಲಿ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿಗಳ ಪೈಕಿ ಪೋರ್ಚುಗಲ್ನ ಕ್ರಿಶ್ಚಿಯಾನೊ ರೊನಾಲ್ಡೋ ಮೊದಲಿಗರಾಗಿದ್ದು, 26.6 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಅರ್ಜೆಂಟಿನಾದ ಲಿಯೊನಲ್ ಮೆಸ್ಸಿ(18.7) ಕೋಟಿ, ಬ್ರೆಜಿಲ್ ನ ನೆಯ್ಮರ್(14.7) ಇದ್ದಾರೆ. ಪಾಪ್ ಸ್ಟಾರ್ ಡಮಿ ಲೆವೆಟೋ(9.9 ಕೋಟಿ) ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್(9.5ಕೋಟಿ) ಬಾರ್ಸಿಲೋನಾ ಎಫ್.ಸಿ(9.4ಕೋಟಿ)ಯನ್ನು ಹೊಂದಿದ್ದಾರೆ. ಆದರೆ ಇದೀಗ ಇವರೆಲ್ಲರನ್ನು ವಿರಾಟ್ ಹಿಂದಿಕ್ಕಿದ್ದಾರೆ.

ಭಾರತೀಯರಲ್ಲಿ ಪ್ರಿಯಾಂಕ ಚೋಪ್ರಾ ಅವರು ಇನ್ಸ್ಟಾಗ್ರಾಮ್ ನಲ್ಲಿ 6 ಕೋಟಿ 80 ಲಕ್ಷ ಫಾಲೋವರ್ಸ್ ಹೊಂದಿದ್ದು, 2 ನೇ ಸ್ಥಾನದಲ್ಲಿದ್ದಾರೆ.