ಇಸ್ರೋ ಐತಿಹಾಸಿಕ ಸಾಧನೆಗೆ ಕ್ಷಣಗಣನೆ ಆರಂಭ, ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ ವಿಕ್ರಮ್ ಲ್ಯಾಂಡರ್…

387
firstsuddi

ಬೆಂಗಳೂರು : ದೇಶದ ಜನತೆ ಕಾತುರದಿಂದ ಕಾಯುತ್ತಿರುವ ಚಂದ್ರಯಾನ-2ವಿಕ್ರಮ್ಲ್ಯಾಂಡರ್ ಇಂದು ತಡರಾತ್ರಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಲಿದ್ದು, ಕುತೂಹಲ ಕ್ಷಣವನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿಗೆ ಆಗಮಿಸಲಿದ್ದು, 70 ಮಂದಿ ಪ್ರೌಢಾ ಶಾಲಾ ಮಕ್ಕಳೊಂದಿಗೆ ಇಸ್ರೋ ಕೇಂದ್ರದಲ್ಲಿ ನೇರ ಪ್ರಸಾರವನ್ನು ವೀಕ್ಷಿಸಲಿದ್ದಾರೆ. ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರನಲ್ಲಿ ಹಡಗಿರುವ ರಹಸ್ಯವನ್ನು ತಿಳಿಯಲು ವಿಕ್ರಮ್ ಲ್ಯಾಂಡರ್ ಇಂದು ತಡರಾತ್ರಿ 1:30 ರಿಂದ 2:30 ವೇಳೆ ಲ್ಯಾಂಡ್ ಆಗಲಿದ್ದು, ರಷ್ಯಾ, ಅಮೇರಿಕಾ ಹಾಗೂ ಚೀನಾದ ನಂತರ ಸಾಧನೆ ಮಾಡಿದ 4ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶೇಷವೆಂದರೆ ಇಲ್ಲಿಯವರೆಗೂ ಯಾವುದೇ ಬಾಹ್ಯಕಾಶ ಸಂಸ್ಥೆ ತೆರಳದ ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-2 ನೌಕೆ ಕಾಲಿಡಲಿದೆ.