ಲಕ್ನೋ: ಇಸ್ಲಾಂನಲ್ಲಿ ವಿವಾಹಪೂರ್ವ ಲೈಂಗಿಕತೆ, ಚುಂಬನ, ಸ್ಪರ್ಶ ಹಾಗೂ ಗುರಾಯಿಸುವಿಕೆಗೆ ನಿಷೇಧ ಇದೆ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ.
ಲಿವ್ ಇನ್ ಸಂಬಂಧದಲ್ಲಿರುವ ಅಂತರ್‌ಧರ್ಮೀಯ ಜೋಡಿಯೊಂದು, ತಮಗೆ ಯುವತಿಯ ಕುಟುಂಬದಿಂದ ಹಾಗೂ ಪೊಲೀಸರಿಂದ ಕಿರುಕುಳವಾಗುತ್ತಿದೆ. ಹೀಗಾಗಿ ರಕ್ಷಣೆ ನೀಡಿ ಎಂದು ಹೈಕೋರ್ಟ್ ಮೊರೆ ಹೋಗಿತ್ತು. ಇದನ್ನು ವಜಾಗೊಳಿಸಿದ ಕೋರ್ಟು, ಈ ಮೇಲಿನ ಅಭಿಪ್ರಾಯ ಹೇಳಿದೆ. ಈ ಮೂಲಕ ಲಿವ್ ಇನ್ ಸಂಬಂಧಕ್ಕೆ ಅಸಮ್ಮತಿ ವ್ಯಕ್ತಪಡಿಸಿದೆ.
ಇಸ್ಲಾಂನಲ್ಲಿ ಗಂಡ-ಹೆಂಡತಿ ಬಿಟ್ಟು ಇತರರ ನಡುವೆ (ಅನೈತಿಕ ಸಂಬಂಧ ಹಾಗೂ ವಿವಾಹಪೂರ್ವ ಲೈಂಗಿಕತೆ) ಲೈಂಗಿಕ ಕ್ರಿಯೆ ನಡೆಸುವುದು ನಿಷಿದ್ಧ. ಇದಕ್ಕೆ ‘ಝೀನಾ’ ಎನ್ನುತ್ತಾರೆ. ಮದುವೆಗೆ ಮುನ್ನ ಯಾವುದೇ ಲೈಂಗಿಕ, ಕಾಮಪ್ರಚೋದಕ, ಪ್ರೀತಿಯಿಂದ ಚುಂಬಿಸುವುದು, ಸ್ಪರ್ಶಿಸುವುದು, ನೋಡುವುದು ಕೂಡ ಇಸ್ಲಾಂ ಪ್ರಕಾರ ‘ಹರಾಮ್’ ಆಗಿದೆ ಎಂದು ವ್ಯಾಖ್ಯಾನಿಸಲಾಗಿದೆ.










