ಈ ಪ್ಯಾಕೇಜ್ ಯಾವುದಕ್ಕೂ ಪ್ರಯೋಜನವಿಲ್ಲ : ಹೆಚ್.ಡಿ.ಕುಮಾರಸ್ವಾಮಿ.

139
firstsuddi

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈ ಪ್ಯಾಕೇಜ್ ಯಾವುದಕ್ಕೂ ಪ್ರಯೋಜನವಿಲ್ಲ, ಹೂವಿನ ಬೆಳೆಗಾರರಿಗೆ ಘೋಷಣೆ ಮಾಡಿರೋ ಪ್ಯಾಕೇಜ್ ಕಳೆದ ವರ್ಷಕ್ಕಿಂತ ಕಡಿಮೆ. ಇದು ಯಾವುದಕ್ಕೂ ಸಾಲುವುದಿಲ್ಲ. ಕೂಲಿ, ಬೀಜದ ಬೆಲೆ ಏರಿಕೆ ಆಗಿರೋವಾಗ ಈ ಸಹಾಯ ಏನೂ ಸಾಲೋದಿಲ್ಲ. ಕೇವಲ ಹೂ ಬೆಳೆಗಾರರಿಗೆ ಮಾತ್ರ ನಷ್ಟವಾಗಿಲ್ಲ, ದ್ರಾಕ್ಷಿ , ಮಾವು ಸೇರಿದಂತೆ ಹಲವು ಬೆಳೆಗಾರರರಿಗೆ ನಷ್ಟವಾಗಿದೆ. ಇದರ ಬಗ್ಗೆ ಮಾಹಿತಿ ಸಂಗ್ರಹಿಸಿ ಪರಿಹಾರ ಘೋಷಿಸಬೇಕಿತ್ತು. ಸಂಕಷ್ಟಕ್ಕೆ ಸ್ಪಂದಿಸುವ ಪ್ಯಾಕೇಜ್ ಕೊಡಬೇಕಿತ್ತು ಎಂದು ಸರ್ಕಾರದ ವಿರುದ್ಧ ಹೆಚ್ ಡಿಕೆ ಗರಂ ಆಗಿದ್ದಾರೆ.

ಕಾರ್ಮಿಕರು, ಚಮ್ಮಾರರು, ಕಮ್ಮಾರಿಗೆ ಕೊಟ್ಟ ಹಣ ಯಾವುದಕ್ಕೂ ಸಾಕಾಗೊಲ್ಲ. ಆಟೋ, ಕ್ಯಾಬ್ ಡ್ರೈವರ್ ಗಳಿಗೆ ಈ ಹಣ ಸಾಕಾಗೊಲ್ಲ. 10 ಕೆಜಿ ಅಕ್ಕಿ ಕೂಡಾ ಸಾಕಾಗೊಲ್ಲ. ಇದು ರಾಜ್ಯ ಸರ್ಕಾರದ ನಾಟಕ. ಜನರ ದುಡ್ಡನ್ನು ನೀವು ಲೂಟಿ ಮಾಡ್ತಿದ್ದೀರಾ. ಲೂಟಿ ಮಾಡೋದನ್ನ ಸರ್ಕಾರ ನಿಲ್ಲಿಸಬೇಕು. ಜನರ ದುಡ್ಡನ್ನು ಜನರಿಗೆ ಕೊಡೋಕೆ ನಿಮಗೇನು ಕಷ್ಟ. ಸರ್ಕಾರವೇನು ಬೆವರು ಸುರಿಸಿ ಪರಿಹಾರ ನೀಡುತ್ತಿದೆಯಾ? ಜನರ ಜೀವನದ ಜೊತೆ ಚೆಲ್ಲಾಟ ಆಡಬೇಡಿ. ಇದೊಂದು ನಿರಾಶಾದಾಯಕ ಪ್ಯಾಕೇಜ್ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.