ಉಗ್ರರೊಂದಿಗೆ ಗುಂಡಿನ ಚಕಮಕಿ ; ಬೀದರ್ ನ ಯೋಧ ಹುತಾತ್ಮ…

80
firstsuddi

ಬೀದರ್ : ಉಗ್ರರ ದಾಳಿಗೆ ಬಿಎಸ್ ಎಫ್ ಯೋಧ ಬಸವರಾಜ್(28) ಹುತಾತ್ಮರಾಗಿದ್ದಾರೆ.

ನಿನ್ನೆ ಸಂಜೆ ಪಂಜಾಬ್ ಗಡಿಯಲ್ಲಿ ಉಗ್ರರು ಹಾಗೂ ಬಿಎಸ್ ಎಫ್ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಯೋಧ ಬಸವರಾಜ ಉಗ್ರರ ವಿರುದ್ಧದ ಗುಂಡಿನ ದಾಳಿಗೆ ಹುತಾತ್ಮರಾಗಿದ್ದಾರೆ. ಜಿಲ್ಲೆಯ ಔರಾದ್ ತಾಲ್ಲೂಕಿನ ಆಲೂರ ಗ್ರಾಮದವರಾದ ಬಸವರಾಜ ಅವರು, ಕಳೆದ 8 ವರ್ಷಗಳಿಂದ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸ್ವಗ್ರಾಮದಲ್ಲೇ ಯೋಧನ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.