ಉಡುಪಿಯಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ-16 ಮಂದಿಗೆ ಪಾಸಿಟಿವ್ ದೃಢ…

122
firstsuddi

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಮಧ್ಯಾಹ್ನದ ವೇಳೆ 16  ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ದೃಢಪಟ್ಟಿರುವ 16 ಪಾಸಿಟಿವ್ ಪ್ರಕರಣಗಳಲ್ಲಿ 14 ಮಂದಿ ಮಹಾರಾಷ್ಟ್ರದಿಂದ ಆಗಮಿಸಿದವರಾದರೆ ಉಳಿದ ಇಬ್ಬರು ದುಬೈ ನಿಂದ ವಾಪಾಸಾದವರಾಗಿದ್ದಾರೆ. ಸೋಂಕಿತ 16 ಮಂದಿಯಲ್ಲಿ 8 ಮಂದಿ ಮಕ್ಕಳು, 6 ಮಂದಿ ಮಹಿಳೆಯರು ಮತ್ತು 2 ಪುರುಷರಿಗೆ ಸೋಂಕು ದೃಢಗೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 92 ಕ್ಕೆ ಏರಿಕೆಯಾಗಿದೆ