ಎತ್ತಿನಗಾಡಿಗೆ ಬೈಕ್ ಡಿಕ್ಕಿ ಹೊಡೆದು ದಂಪತಿ ಸಾವು…

137
firstsuddi

ಬಳ್ಳಾರಿ : ಎತ್ತಿನಗಾಡಿಗೆ ಬೈಕ್ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಬೆನಕನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಶಿವಕುಮಾರ್ (34) ಹಾಗೂ ನಿವೇದಿತಾ (23) ಎಂದು ಗುರುತಿಸಲಾಗಿದೆ. ಮೃತರು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹೊಸಕೆರೆಯಿಂದ ಸಂಡೂರಿನ ಕಡೆಗೆ ತೆರಳಿತ್ತಿದ್ದ ವೇಳೆ ಎತ್ತಿನಗಾಡಿಗೆ ಡಿಕ್ಕಿ ಹೊಡೆದು ಎತ್ತಿನಗಾಡಿಯ ಮುಂಭಾಗದ ಕಬ್ಬಿಣದ ಸಲಾಕೆ ಇಬ್ಬರ ಎದೆಗೆ ಚುಚ್ಚಿದ್ದು, ಪರಿಣಾಮ ದಂಪತಿ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕೊಟ್ಟೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.