ಎರಡನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ…

74
firstsuddi

ಚಾಮರಾಜನಗರ : ಭಾರತ್ ಜೋಡೋ ಯಾತ್ರೆಯ ಎರಡನೇ ದಿನದ ಪಾದಯಾತ್ರೆ ಚಾಮರಾಜನಗರ ಜಿಲ್ಲೆಯ ತೊಂಡವಾಡಿ ಗೇಟ್ ನಿಂದ ಆರಂಭವಾಗಿದೆ. ಬೆಳಗ್ಗೆ 7.40ಕ್ಕೆ ಪಾದಯಾತ್ರೆ ಆರಂಭಗೊಂಡಿದ್ದು, ರಾಹುಲ್ ಗಾಂಧಿ, ಡಿಕೆಶಿ, ಸಿದ್ದರಾಮಯ್ಯ ಸೇರಿದಂತೆ ಹಲವು ಕಾರ್ಯಕರ್ತರು ಹೆಜ್ಜೆ ಹಾಕುತ್ತಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಮೊದಲ ದಿನವಾದ ನಿನ್ನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಕ್ಯಾಂಟರ್ ಹೌಸ್ ನಲ್ಲಿ ರಾಹುಲ್ ಗಾಂಧಿ ತಂಗಿದ್ದರು. ಇಂದು ಗುಂಡ್ಲುಪೇಟೆ ಬೇಗೂರಿನ ತೊಂಡವಾಡಿ ಗೇಟ್ ನಿಂದ ಯಾತ್ರೆ ಪ್ರಾರಂಭವಾಗಿದ್ದು, ಕೆಲವೇ ತಾಸಿನಲ್ಲಿ ಮೈಸೂರು ಜಿಲ್ಲೆಗೆ ಆಗಮಿಸಲಿದೆ.

ಬೆಳಗ್ಗೆ ಸುಮಾರು 15 ಕಿಮೀ ಪಾದಯಾತ್ರೆ ನಡೆಸಿ 4 ಗಂಟೆ ಸುಮಾರಿಗೆ ಕಳಲೆ ಗೇಟ್ ನಿಂದ ಮತ್ತೆ ಯಾತ್ರೆ ಪುನಾರಂಭ ಆಗಲಿದೆ. ಸಂಜೆ 7 ಗಂಟೆವರೆಗೂ ಪಾದಯಾತ್ರೆ ನಡೆಯಲಿದೆ. ಚಿಕ್ಕಯ್ಯನ ಛತ್ರದ ಗೇಟ್ ಬಳಿ ಎರಡನೇ ದಿನದ ಯಾತ್ರೆ ಮುಕ್ತಾಯವಾಗಲಿದ್ದು, ತಾಂಡವಪುರ ಎಂಐಟಿ ಕಾಲೇಜ್ ಗೇಟ್ ಬಳಿ ವಾಸ್ತವ್ಯ ಹೂಡಲಿದ್ದಾರೆ.