ಎಲ್‍ಕೆಜಿಯಿಂದ 10ನೇ ತರಗತಿವರೆಗೆ ಆನ್‍ಲೈನ್ ತರಗತಿ ನಡೆಸಲು ರಾಜ್ಯ ಸರ್ಕಾರ ಅನುಮತಿ…

266
firstsuddi

ಬೆಂಗಳೂರು : ಎಲ್‍ಕೆಜಿಯಿಂದ ಹಿಡಿದು 10ನೇ ತರಗತಿವರೆಗೆ ಆನ್‍ಲೈನ್ ತರಗತಿ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೈಕೋರ್ಟ್ ನಿರ್ದೇಶನ ಮಾಡಿರುವ ಹಿನ್ನೆಲೆ ರಾಜ್ಯದಲ್ಲಿ ಮತ್ತೆ ಆನ್‍ಲೈನ್ ಶಿಕ್ಷಣ ನೀಡಲು ಸರ್ಕಾರ ಅನುಮತಿ ನೀಡಿದ್ದು, ಈ ವೇಳೆ ಕೆಲವು ನಿಯಮಾವಳಿಗಳನ್ನು ಪಾಲಿಸಬೇಕಾಗಿದ್ದು, ಸರ್ಕಾರ ರಚಿಸಿರುವ ತಜ್ಞರ ಸಮಿತಿಯ ವರದಿ ಬರುವವರೆಗೂ ಶಿಕ್ಷಣ ಸಂಸ್ಥೆಗಳು ಈ ನಿಯಮವನ್ನು ಅನುಸರಿಸಬೇಕಾಗುತ್ತದೆ. ಹಾಗೂ ಆನ್‍ಲೈನ್ ತರಗತಿ ನಡೆಸಲು ಹೆಚ್ಚುವರಿ ಶುಲ್ಕವನ್ನು ಪಡೆಯುವಂತಿಲ್ಲ. ಅಲ್ಲದೆ ಇದಕ್ಕೆ ತಗುಲುವು ವೆಚ್ಚವನ್ನು ವಾರ್ಷಿಕ ಬೋಧನಾ ಶುಲ್ಕಾದಿಂದಲೇ ಭರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಆನ್‍ಲೈನ್ ತರಗತಿ ನಡೆಸಲು ಸರ್ಕಾರ ನೀಡಿದ ನಿಯಮಾವಳಿಗಳು :

• ಪೂರ್ವ ಪ್ರಾಥಮಿಕ-30 ನಿಮಿಷಗಳಿಗೆ ಮೀರದಂತೆ ವಾರಕ್ಕೆ ಒಂದು ದಿನ ಆನ್‍ಲೈನ್ ತರಗತಿ(ಪಾಲಕರು ಜೊತೆಯಲ್ಲಿ ಇರುವುದು ಕಡ್ಡಾಯ).
• 1-5ನೇ ತರಗತಿ : 30-45 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ದಿನ ಬಿಟ್ಟು ದಿನ ಆನ್‍ಲೈನ್ ತರಗತಿ.
• 6-8ನೇ ತರಗತಿ : 30-40 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಆನ್‍ಲೈನ್ ತರಗತಿ.
• 9-10ನೇ ತರಗತಿ : 30-45 ನಿಮಿಷಗಳ 4 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಆನ್‍ಲೈನ್ ತರಗತಿ