ಒಂಬತ್ತು ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ…

74
firstsuddi

ಬೆಂಗಳೂರು : ಕರ್ನಾಟಕದ ಒಂಬತ್ತು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಿಐಡಿ ಎಸ್​ಪಿ ಆಗಿದ್ದ ರವಿ ಡಿ. ಚನ್ನಣ್ಣನವರ್ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾವಣೆಗೊಳಿಸಲಾಗಿದೆ. ಇವರೊಂದಿಗೆ ಭೀಮಾಶಂಕರ ಗುಳೇದ್ – ಡಿಸಿಪಿ, ಬೆಂಗಳೂರು ಪೂರ್ವ, ಡಿ. ಕಿಶೋರ್ ಬಾಬು – ಬೀದರ್ ಪೊಲೀಸ್ ವರಿಷ್ಠಾಧಿಕಾರಿ, ಅರುಣಾಂಗ್ಶು ಗಿರಿ – ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ, ಡಿ.ಎಲ್. ನಾಗೇಶ್ – ಸಿಐಡಿ ಎಸ್​ಪಿ , ಅಬ್ದುಲ್ ಅಹಾದ್ – ಕೆಎಸ್‌ಆರ್‌ಟಿಸಿ ನಿರ್ದೇಶಕ, ಟಿ. ಶ್ರೀಧರ್ – ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್​ಪಿ, ಟಿ.ಪಿ. ಶಿವಕುಮಾರ್ – ಚಾಮರಾಜನಗರ ಎಸ್​ಪಿ ಹಾಗೂ ದಿವ್ಯಸಾರ ಥಾಮಸ್ – ಪೊಲೀಸ್ ಅಕಾಡೆಮಿ ಉಪ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.