ಓಮಿಕ್ರಾನ್ ಹೊಸ ತಳಿ ಆಗಿರೋದ್ರಿಂದ ಮೃದು ಲಕ್ಷಣ ಕಾಣುತ್ತಿದೆ : ಸಚಿವ ಸುಧಾಕರ್.

73
firstsuddi

ಬೆಂಗಳೂರು : ಓಮಿಕ್ರಾನ್ ಹೊಸ ತಳಿ ಆಗಿರೋದ್ರಿಂದ ಮೃದು ಲಕ್ಷಣ ಕಾಣುತ್ತಿದೆ. ಇದರ ತೀವ್ರತೆ ಏನು ಅಂತ ನಮಗೆ ಇನ್ನು ಗೊತ್ತಾಗಿಲ್ಲ. ಹೀಗಾಗಿ ಯಾರು ಕೂಡಾ ನಿರ್ಲಕ್ಷ್ಯ ಮಾಡಬಾರದು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ವಿಶೇಷ ಲಸಿಕೆ ಡ್ರೈವ್ ಆಯೋಜನೆ ಮಾಡಲಾಗಿದೆ. 7 ಕೋಟಿ 80 ಲಕ್ಷ ಡೋಸ್ ಲಸಿಕೆ ಕೊಡಲಾಗಿದೆ. ಶೇ.68 ಎರಡು ಡೋಸ್ ಪಡೆದವರ ಸಂಖ್ಯೆ ಆಗಿದೆ. ಜನರು ಉತ್ಸಾಹದಿಂದ ಲಸಿಕೆ ಹಾಕಿಸಿಕೊಳ್ತಿದ್ದಾರೆ. ಕರ್ನಾಟಕ ರಾಜ್ಯದ ಕ್ರಮ ಸರಿಯಾಗಿದೆ ಅಂತ ಕೇಂದ್ರ ಹೇಳಿದೆ. ಬೇರೆ ರಾಜ್ಯ ಕೂಡ ಇದನ್ನ ಪಾಲನೆ ಮಾಡಿ ಅಂತ ಹೇಳಿದೆ. ಇತಿಹಾಸದ ಸಾಂಕ್ರಾಮಿಕ ರೋಗ ನೋಡಿದ್ರೆ 2 ಅಲೆ ತೀವ್ರವಾಗಿ ಇರುತ್ತೆ. ಬಳಿಕ 3-4 ನೇ ಅಲೆ ತೀವ್ರತೆ ಕಡಿಮೆ ಇರುತ್ತೆ. ಹಾಗಾಂತ ಯಾರು ನಿರ್ಲಕ್ಷ್ಯವಹಿಸಬಾರದು. ಮಾಸ್ಕ್ ಹಾಕಬೇಕು, ಲಸಿಕೆ ಹಾಕಿಸಿಕೊಳ್ಳಬೇಕು. ಕೊರೊನಾ ಎಂಡ್ ಆಗೋ ಕೊನೆ ದಿನಗಳು ಕಂಡು ಬರುತ್ತಿವೆ. ಆದರೆ ಹಾಗಂತ ಯಾರೂ ಉದಾಸೀನ ಮಾಡಬಾರದು. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿಕೊಂಡರು.

ಇದೇ ವೇಳೆ ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕೆ ಟಫ್ ರೂಲ್ಸ್ ಜಾರಿಗೆ ತರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಸಿಎಂ ಚರ್ಚೆ ಮಾಡ್ತಿದ್ದಾರೆ. ಆದಷ್ಟು ಬೇಗ ಸಿಎಂ ಈ ಬಗ್ಗೆ ನಿರ್ಧಾರ ಮಾಡ್ತಾರೆ. ನಾಳೆಯ ಸಭೆಯಲ್ಲೂ ಟಫ್ ರೂಲ್ಸ್ ಬಗ್ಗೆ ಚರ್ಚೆ ಆಗುತ್ತೆ ಎಂದು ತಿಳಿಸಿದರು.