ಚಿಕ್ಕಮಗಳೂರು : ಮುಂಬೈನಿಂದ ಬಂದಿರುವ ಮಹಿಳೆಯನ್ನು ಕಂಡು ಜಿಲ್ಲೆಯ ಕಡೂರು ಪಟ್ಟಣದ ಜನ ಆತಂಕಕ್ಕೀಡಾಗಿದ್ದಾರೆ. ಕಡೂರಿನ ಪಟ್ಟಣದ ಜೈನ ಮಂದಿರದ ಬಳಿ ನಿಂತಿದ್ದ ಮಹಿಳೆ ತೀವ್ರವಾದ ಕೆಮ್ಮಿನಿಂದ ಬಳಲುತ್ತಿದ್ದರು. ಇದನ್ನು ಕಂಡು ಆತಂಕಕ್ಕೀಡಾದ ಸ್ಥಳಿಯರು ಕಡೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಯುವತಿಯ ವಿಚಾರಿಸಿದಾಗ ಯಾವೊಂದು ಮಾಹಿತಿಯನ್ನು ಸ್ಪಷ್ಟವಾಗಿ ನೀಡಿಲ್ಲ. ಸುಮಾರು 30 ವರ್ಷ ಪ್ರಾಯದ ಮಹಿಳೆ ಪೊಲೀಸರ ಪ್ರಶ್ನೆಗೆ ಒಂದೊಂದು ಬಾರಿ ಒಂದೊಂದು ಉತ್ತರ ನೀಡಿದ್ದಳು. ಹಾಗಾಗಿ, ಪೊಲೀಸರು ಆಕೆಯನ್ನು ಆರೋಗ್ಯ ಸಿಬ್ಬಂದಿಗಳ ಜೊತೆ ಆಸ್ಪತ್ರೆಗೆ ಕರೆದೊಯ್ದು ಆಕೆಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆಂದು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಬಳಿಕ ಯುವತಿಯನ್ನು ಚಿಕ್ಕಮಗಳೂರಿನ ಮಧುವನ ಲೇ ಔಟ್ನಲ್ಲಿರುವ ಕ್ವಾರಂಟೈನ್ ಘಟಕಕ್ಕೆ ಬಿಟ್ಟಿದ್ದಾರೆ. ಯುವತಿ ಕಡೂರಿನ ಎರಡ್ಮೂರು ಏರಿಯಾಗಳಲ್ಲಿ ಓಡಾಡಿರುವ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಜೈನ ಮಂದಿರ, ಐಬಿ ರಸ್ತೆ ಸೇರಿದಂತೆ ಮೂರು ಏರಿಯಾಗಳನ್ನು ಸಂಪೂರ್ಣ ಲಾಕ್ಡೌನ್ ಮಾಡಿದ್ದಾರೆ. ಮೂರು ಏರಿಯಾಗಳಲ್ಲು ಪೊಲೀಸರ ತೀವ್ರ ಬಂದೋಬಸ್ತ್ ಕಲ್ಪಿಸಿದ್ದಾರೆ. ಜನ ಅನಾವಶ್ಯಕವಾಗಿ ಮನೆಯಿಂದ ಹೊರಬಾರದಂತೆ ಎಚ್ಚರವಹಿಸಿದ್ದಾರೆ
Home ಸ್ಥಳಿಯ ಸುದ್ದಿ ಕಡೂರು : ಮುಂಬೈನಿಂದ ಬಂದಿರುವ ಮಹಿಳೆ ತೀವ್ರವಾದ ಕೆಮ್ಮಿನಿಂದ ಬಳಲುತ್ತಿದ್ದನ್ನು ಕಂಡು ಆತಂಕಕ್ಕೀಡಾದ ಸ್ಥಳೀಯರು…









