ಕನ್ನಡದ ಖ್ಯಾತ ಕವಿ ಹಾಗೂ ಹಿರಿಯ ಸಾಹಿತಿ ಎನ್.ಎಸ್ ಲಕ್ಷ್ಮೀನಾರಾಯಣ ಭಟ್ ವಿಧಿವಶ…

103
Firstsuddi

ಬೆಂಗಳೂರು : ನಾಡಿನ ಎನ್ಎಸ್ಎಲ್ ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಹಾಗೂ ಖ್ಯಾತ ಕವಿ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ ಅವರು ಇಂದು ಮುಂಜಾನೆ 4:45 ಸುಮಾರಿಗೆ ಬನಶಂಕರಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಅವರಿಗೆ 85 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದ ಇವರು 1936 ನವೆಂಬರ್ 29ರಂದು ಜನಿಸಿದರು. ಎನ್ಎಸ್ಎಲ್ ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ವೃತ್ತಿ, ಸುಳಿ, ನಿನ್ನದೆ ನನ್ನ ಮಾತು, ಹೊಳೆಯ ಸಾಲಿನ ಮರ, ಪಾಂಚಾಲಿ, ಅರುಣಗೀತೆ, ಚಿತ್ರಕೂಟ, ದೀಪಿಕಾ, ಬಾರೋ ವಸಂತ, ಸುನೀತಾ ಕವನ ಸಂಕಲನಗಳನ್ನು ಲಕ್ಷ್ಮೀ ನಾರಾಯಣ ಭಟ್ ಅವರು ಬರೆದಿದ್ದರು. 1974 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ಅಲ್ಲದೇ ಎಲಿಯಟ್, ಷೇಕ್ಸ್ ಪಿಯರ್ ಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದರು.

ಬೆಳಗ್ಗೆ 10-30ರ ವರೆಗೆ ಬನಶಂಕರಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ.