ಕಲಬುರಗಿ: ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೇವೆಗೆ ಅನುಮತಿ…

57
firstsuddi

ಕಲಬುರಗಿ: ಬಹು ನಿರೀಕ್ಷಿತ ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೇವೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಅನುಮತಿ ನೀಡಿದೆ.

ಸದ್ಯಕ್ಕೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಮಾತ್ರ ವಿಮಾನ ಹಾರಾಟ ನಡೆಸುತ್ತಿದೆ. ಇನ್ನು ರಾತ್ರಿ ಇಳಿಯುವಿಕೆಯ ಅನುಮತಿಯೊಂದಿಗೆ ಸೂರ್ಯಾಸ್ತದ ನಂತರವೂ ಕಾರ್ಯಾಚರಣೆಗಳನ್ನು ಕೈಗೊಳ್ಳಬಹುದು. ನೈಟ್ ಲ್ಯಾಂಡಿಂಗ್ ಸಾಮರ್ಥ್ಯವು ಹೆಚ್ಚಿನ ವಿಮಾನಯಾನ ನಿರ್ವಾಹಕರಿಗೆ ತಮ್ಮ ವಿಮಾನಗಳನ್ನು ಕಲಬುರಗಿ ವಿಮಾನ ನಿಲ್ದಾಣದಿಂದ ನಿರ್ವಹಿಸಲು ಅನುವು ಮಾಡಿಕೊಡಲಿದೆ.

ಡಿಜಿಸಿಎ 27ರ ರನ್ ವೇಯಲ್ಲಿ ನೈಟ್ ಲ್ಯಾಂಡಿಂಗ್ ಗೆ ಪರವಾನಗಿ ನೀಡಿದೆ. 27ರ ರನ್ ವೇಯಲ್ಲಿ ಯಾವುದೇ ನಿರ್ಬಂಧಗಳಿಲ್ಲ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಚಿಲಕ ಮಹೇಶ್ ಹೇಳಿದ್ದಾರೆ. ತಡೆಗೋಡೆ ತೆರವುಗೊಳಿಸಿದ ನಂತರ ವಿಮಾನ ನಿಲ್ದಾಣವು ರನ್ ವೇ 9ರಲ್ಲಿ ಹಾರಾಟ ನಡೆಸಲು ಅನುಮತಿ ಪಡೆಯಲಿದೆ.

ಕಳೆದ ಆರು ತಿಂಗಳಲ್ಲಿ ವಿಮಾನ ನಿಲ್ದಾಣದ ಗ್ರೌಂಡ್ ಲೈಟಿಂಗ್, ರನ್ ವೇ ಮೂಲಸೌಕರ್ಯ, ಉಪಗ್ರಹ ಆಧಾರಿತ ಪೈಲಟ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ರಾತ್ರಿ ಲ್ಯಾಂಡಿಂಗ್ ಸೇವೆಗೆ ಅಗತ್ಯವಾದ ವಾಯು ಮಾರ್ಗ ನಕ್ಷೆಯನ್ನು ಸಿದ್ಧಪಡಿಸಲಾಗಿದೆ ಎಂದು ಡಾ. ಮಹೇಶ್ ಹೇಳಿದರು. ಈ ಪ್ರದೇಶದಲ್ಲಿನ ಎತ್ತರದ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗಿದೆ. ರಾತ್ರಿ ಲ್ಯಾಂಡಿಂಗ್​​ಗಾಗಿ  ರನ್ ವೇ ಯನ್ನು 140 ಮೀಟರ್​ನಿಂದ 280 ಮೀಟರ್​ಗೆ ವಿಸ್ತರಿಸಲು ತಾಂತ್ರಿಕ ವರದಿಯನ್ನು ಡಿಜಿಸಿಎಗೆ ಕಳುಹಿಸಲಾಗಿದೆ.