ಕಲರ್ಸ್ ಚಾನೆಲ್ ಡ್ಯಾನ್ಸ್ ದಿವಾನಿ ಕಾರ್ಯಕ್ರಮದಲ್ಲಿ ಕನ್ನಡದ ಕಂಪು ಬೀರಿದ ಮೂಡಿಗೆರೆ ಕಿಶನ್….

2262
firstsuddi
  • ರಾಘವೇಂದ್ರ ಕೆಸವಳಲು, ಸಂಪಾದಕ

ಮೂಡಿಗೆರೆ – ಮೂಡಿಗೆರೆ ಜನ ತಮ್ಮ ಶಾರ್ಟ್ ಕಾಲರ್‍ನ ಮೇಲೆ ಮಾಡ್ಕೊಂಡ್ ಓಡಾಡ್ಬೇಕಾದ ಸ್ಟೋರಿ ಇದು. ಯಾಕೆಂದರೆ, ಖಾಸಗಿ ಹಿಂದಿ ವಾಹಿನಿಯಲ್ಲಿ ನಡೆಯುತ್ತಿರೋ ಡ್ಯಾನ್ಸ್ ದಿವಾನಿ ಕಾರ್ಯಕ್ರಮದಲ್ಲಿ ದೇಶದ ಜನರನ್ನ ಕೂತಲ್ಲೆ ಕುಣಿಸುತ್ತಿರೋ ಮಲೆನಾಡ ಮಡಿಲ ಯುವಕ ಇದೇ ಕಾರ್ಯಕ್ರಮದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಠಿಸಿದ್ದಾನೆ. ಈತನ ಸಾಧನೆಗೆ ಮೂಡಿಗೆರೆಗಷ್ಟೆ ಅಲ್ಲದೆ ಇಡೀಕರುನಾಡೆ ಮೆಚ್ಚಬೇಕು. ಕಾಫಿ ಪ್ಲಾಂಟರ್‍ಗಳ ಮಕ್ಕಳಿಗೇನು ಕೊರತೆ. ಆರಾಮಾಗಿರ್ತಾನೆ ಅನ್ನೋದು ಬಹುತೇಕರ ನಂಬಿಕೆ. ಆದರೆ, ಕಾಫಿ ಬೆಳೆಗಾರರ ಮಕ್ಕಳು ಅಪ್ಪ-ಅಜ್ಜನ ಕಾಫಿ ತೋಟಕ್ಕೆ ಸೀಮಿತವಾಗದೆ ಗಡಿಯಾಚೆಯಲ್ಲೂ ತಮ್ಮಲ್ಲಿರೋ ಅಸಾಧಾರಣ ಪ್ರತಿಭೆಯನ್ನ ಅನಾವರಣಕ್ಕಿಟ್ಟಿದ್ದಾರೆ ಅಂದರೆ, ನಿಜಕ್ಕೂ ಮೂಡಿಗೆರೆ ಜನರ ಹೆಗ್ಗಳಿಕೆ ಮತ್ತಷ್ಟು ಹೆಚ್ಚಾಗೋದ್ರಲ್ಲಿ ಅನುಮಾನವಿಲ್ಲ.

ಹೌದು, ಖಾಸಗಿ ಹಿಂದಿ ವಾಹಿನಿಯಲ್ಲಿ ಬರುತ್ತಿರೋ ಡ್ಯಾನ್ಸ್ ದಿವಾನಿ ಕಾರ್ಯಕ್ರಮದಲ್ಲಿ ದೇಶದ ಜನರನ್ನೇ ನಿಬ್ಬೆರಗಾಗಿಸಿರೋ ಕಿಶನ್ ಎಂ. ಬಿಳಗಳಿ ಮೂಲತಃ ಮೂಡಿಗೆರೆ ಯುವಕ. ಆಡಿಷನ್‍ಗೆ ಬಂದ ಲಕ್ಷಾಂತರ ಸ್ಪರ್ಧಾಳುಗಳಲ್ಲಿ ಕಾರ್ಯಕ್ರಮದ ನಿರ್ಮಾಪಕರು ಸಾವಿರಾರು ಸ್ಪರ್ಧಾಳುಗಳನ್ನ ಸೆಲೆಕ್ಟ್ ಮಾಡಿಕೊಂಡಿದ್ದರು. ಅದರಲ್ಲಿ ನಮ್ಮ ಕಿಶನ್ ಕೂಡ ಒಬ್ಬ. ಸಾವಿರಾರು ಸ್ಪರ್ಧಾಳುಗಳಿದ್ದ  ಕಾರ್ಯಕ್ರಮದಲ್ಲಿ ಹಂತ-ಹಂತವಾಗಿ ಎಲ್ಲಾ ಮೆಟ್ಟಿಲುಗಳನ್ನು ಹತ್ತಿಕೊಂಡು ಇಂದು ಸೆಮಿಫೈನಲ್ ಬಂದಿರೋ ಮೂರೇ ಮೂರು ಯುವಕರಲ್ಲಿ ನಮ್ಮ ಹೆಮ್ಮೆಯ ಕಿಶನ್ ಕೂಡ ಒಬ್ಬ. ನಿಜಕ್ಕೂ ಇದು ಅಸಾಧಾರಣ ಸಾಧನೆ. ಮಲೆನಾಡಿನಿಂದ ಹೋಗಿ ದೇಶವೇ ಮೆಚ್ಚಿ ಹೊಗಳೋ ಕಾರ್ಯಕ್ರಮದಲ್ಲಿ ಸಾವಿರಾರು ಜನರ ಮಧ್ಯೆ ಈ ಹಂತಕ್ಕೆ ಬರೋದು ಅಂದರೆ, ಅದು ನಿಜಕ್ಕೂ ತಪ್ಪಸ್ಸು ಅಂದರೆ ತಪ್ಪಿಲ್ಲ. ಸೆಮಿಫೈನಲ್‍ನಿಂದ ಫೈನಲ್‍ನಲ್ಲೂ ಗೆಲ್ಲಲ್ಲಿ ಅನ್ನೋದು ಮೂಡಿಗೆರೆ ಹಾಗೂ ಕನ್ನಡಿಗರ ಆಶಯ. ಗುಡ್ ಲಕ್ ಕಿಶನ್……