ಚೆನ್ನೈ: ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿ ನಡೆಸಿದೆ. ಮೂಲಗಳ ಪ್ರಕಾರ ದೆಹಲಿ, ಮುಂಬೈ ಮತ್ತು ಚೆನ್ನೈನ ಏಳು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ.
ಕಾರ್ತಿ ಚಿದಂಬರಂ ಮಾಜಿ ಕೇಂದ್ರ ಸಚಿವ ಹಾಗು ಕಾಂಗ್ರೆಸ್ ನ ಹಿರಿಯ ನಾಯಕ ಪಿ.ಚಿದಂಬರಂ ಅವರ ಪುತ್ರ. ಚೀನಾದ ಪ್ರಜೆಗಳ ವೀಸಾಗೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಲೋಕಸಭೆ ಸಂಸದರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ ಹೊಸ ಪ್ರಕರಣ ದಾಖಲಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ, ನಾನು ಎಣಿಕೆ ಕಳೆದುಕೊಂಡಿದ್ದೇನೆ, ನನ್ನ ಮೇಲೆ ಅದೆಷ್ಟು ಬಾರಿ ದಾಳಿ?, ಬಹುಶ: ಇದೊಂದು ದಾಖಲೆ ಎಂದು ಬರೆದುಕೊಂಡಿದ್ದಾರೆ.










