ಕಾಂಗ್ರೆಸ್ ಶಾಸಕ ಚೆಲುವರಾಯಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್ ಶಾಸಕ ಸುರೇಶ್ ಗೌಡ…

238
firstsuddi

ಮಂಡ್ಯ : ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು ಕಾಂಗ್ರೆಸ್ ಶಾಸಕ ಚೆಲುವರಾಯಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಅವರು ಹೆಂಗಸನ್ನು ಮುಂದೆ ಇಟ್ಟುಕೊಂಡು ಸುಮಲತಾ ಅವರಿಗೆ ಬೆಂಬಲವನ್ನು ನೀಡಿದ್ದಾರೆ. ನೇರವಾಗಿ ನಾನು ಸುಮಲತಾ ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರೆ ಅದನ್ನು ಗಂಡಸ್ಥನ ಎಂದು ಹೇಳಬಹುದಿತ್ತು. ಕಾಂಗ್ರೆಸ್‍ನ ಮಾಜಿ ಸಂಸದೆ ರಮ್ಯಾ ಅವರನ್ನು ಅಭ್ಯರ್ಥಿಯಾಗಿ ನಾನೇ ಮಾಡಿದ್ದು, ನಾನು ಅವರಿಗೆ ನೇರವಾಗಿ ಬೆಂಬಲ ನೀಡಿದ್ದೇನೆ. ನಾನು ಆಗಾ ಶಿಖಂಡಿತನ ಮಾಡಿಲ್ಲ ಎಂದು ಹೇಳಿದ್ದು, ನನಗೆ ಚೆಲುರಾಯಸ್ವಾಮಿ ಅವರು ನನಗೆ ತೊಂದರೆ ನೀಡಿದ್ದಾರೆ ಹೀಗಾಗಿ ನನಗೆ ಅವರ ಮೇಲೆ ದ್ವೇಷವಿದೆ. ಅವರು ಹೈ ಕಮಾಂಡ್ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿರಬೇಕು. ಇಲ್ಲದಿದ್ದರೆ ಒಕ್ಷವನ್ನು ಬಿಟ್ಟು ಹೋಗಬೇಕು. ಸುಮಲತಾ ಅವರನ್ನು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಮನೆಗೆ ಕಳುಹಿಸಿದವರು ಯಾರು? ಹೋಟೆಲ್ ನಲ್ಲಿ ಮೀಟಿಂಗ್ ಮಾಡಿದ್ದು ಯಾರು? ನಮ್ಮ ಅಭ್ಯರ್ಥಿಯನ್ನು ಸೋಲಿಸಲು ಪ್ರಯತ್ನ ಪಟ್ಟಿರುವುದನ್ನು ನೇರವಾಗಿ ಒಪ್ಪಿಕೊಳ್ಳಲಿ. ಇದೆಲ್ಲ ರಾಜಕೀಯ ವ್ಯಭಿಚಾರಿಗಳು ಮಾಡುವ ಕೆಲಸ ಎಂದು ಕಿಡಿ ಕಾರಿದರು.