ಚಿಕ್ಕಮಗಳೂರು : ಕಾಂಗ್ರೆಸ್ ಅವರಿಗೆ ಅವರ ಪಕ್ಷದ ಶಾಸಕರನ್ನೇ ಉಳಿಸಿಕೊಳ್ಳಲು ಆಗಲಿಲ್ಲ, ಸೆಳೆಯುವುದು ಎಲ್ಲಿಂದ ಬಂತು. ಅವರ ಶಾಸಕರನ್ನೇ ಏಕೆ ಉಳಿಸಿಕೊಳ್ಳಲಾಗಲಿಲ್ಲ ಎನ್ನುವುದನ್ನು ಕಾಂಗ್ರೆಸ್ ರಿಸರ್ಚ್ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅಥವಾ ಡಿ ಕೆ ಶಿವಕುಮಾರ್ ಇಬ್ಬರಲ್ಲಿ ಒಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದ್ರೆ ಸೇಡು ತೀರಿಸಿಕೊಳ್ಳಲು ಪರಮೇಶ್ವರ್ ಅವರೇ ಹೊರಗೆ ಬರುತ್ತಾರೆ. ಕೇಡರ್ ಆಧಾರಿತ ಪಾರ್ಟಿ, ನಮ್ಮದು ಕಾಂಗ್ರೆಸಿನಷ್ಟು ದುರ್ಬಲ ಪಕ್ಷವಲ್ಲ.
ನಮ್ಮವರು ಏಕೆ ಪಾರ್ಟಿ ಬಿಟ್ಟರು ಅಂತ ಸಂಶೋಧನ ತಂಡ ರಚನೆ ಮಾಡಿ ಅಧ್ಯಯನ ಮಾಡಲಿ. ಆಗ ಸೆಳೆಯಬಹುದೋ, ಹೋಗುತ್ತಾರೋ, ಬರುತ್ತಾರೋ ಗೊತ್ತಾಗುತ್ತದೆ. ಅವರು ಯಾವಾಗಲೂ ಸುಮ್ಮನೆ ಸುದ್ದಿಯಲ್ಲಿ ಇರಬೇಕು ಎಂದು ಆಗಾಗ ಹೀಗೆ ಹೇಳುತ್ತಿರುತ್ತಾರೆ ಎಂದು ಹೇಳಿದರು.










