ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಅಚ್ಚಲು ಗ್ರಾಮದ ಇಂದಿರಾ ನಗರದಲ್ಲಿ ಕಾಡಾನೆ ದಾಳಿಯಿಂದ ಒಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ಕಾಡಾನೆ ದಾಳಿಯಲ್ಲಿ 50 ವರ್ಷದ ಜಯಮ್ಮ ಎಂಬುವರು ಮೃತಪಟ್ಟಿದ್ದು, ಅವರ ತಂಗಿ 45 ವರ್ಷದ ವೆಂಕಟಲಕ್ಷ್ಮಮ್ಮನ ಪರಿಸ್ಥಿತಿ ಗಂಭೀರವಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










