ಕಾಫಿ ವ್ಯಾಪಾರದಲ್ಲಿ ನಷ್ಟ ; ನೇಣಿಗೆ ಶರಣಾದ ಯುವ ಉದ್ಯಮಿ…

182
firstsuddi

ನೆಲಮಂಗಲ : ಕಾಫಿ ವ್ಯಾಪಾರದಲ್ಲಿ ನಷ್ಟವಾದ ಪರಿಣಾಮ ಯುವ ಉದ್ಯಮಿ ನೇಣಿಗೆ ಶರಣಾಗಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿ ಶಾಕೀರ್ ಅಹ್ಮದ್ ಆತ್ಮಹತ್ಯೆಗೆ ಶರಣಾದ ಉದ್ಯಮಿ. 1 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದ ಶಾಕೀರ್ ಅಹ್ಮದ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಖಾಸಗಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 13 ರಿಂದ ನಾಪತ್ತೆಯಾಗಿದ್ದಾರೆಂದು ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಜುಲೈ 29 ರಿಂದ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಬಳಿಯ ವಜ್ರೇಶ್ವರಿ ಲಾಡ್ಜ್ ನಲ್ಲಿ ಶಾಕೀರ್ ತಂಗಿದ್ದರು. ಪ್ರತಿದಿನ ಊಟ ಕೊಡಲು ರೂಂಗೆ ಹೋಗುತ್ತಿದ್ದ ಲಾಡ್ಜ್ ಸಿಬ್ಬಂದಿ, ನಿನ್ನೆ ಮಧ್ಯಾಹ್ನ ಸಹ ಹೋದಾಗ ಶಕೀರ್ ಬಾಗಿಲು ತೆಗೆಯಲಿಲ್ಲ. ಇದರಿಂದ ಅನುಮಾನಗೊಂಡು ಪರಿಶೀಲಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ.